ಮಂಗಳೂರು, ನ 26 (Daijiworld News/MB) : ನವ ಮಂಗಳೂರು ಬಂದರಿಗೆ ಈ ವರ್ಷದ ಐದನೇ ಐಷಾರಾಮಿ ಪ್ರವಾಸಿ ಹಡಗು ಮಂಗಳವಾರ ಬಂದಿದೆ.
ಕಾಸ್ಟವಿಕ್ಟೋರಿಯಾ ಎಂಬ ಹೆಸರಿನ ಈ ಹಡಗಿನಲ್ಲಿ ಒಟ್ಟು 1900 ಪ್ರವಾಸಿಗರು ಆಗಮಿಸಿದ್ದು ಈ ಸಂದರ್ಭದಲ್ಲಿ ಕರಾವಳಿ ಜಾನಪದ ನೃತ್ಯದ ಮೂಲಕ ಸ್ವಾಗತಿಸಲಾಯಿತು.
ಇಟಲಿಯ ಈ ಹಡಗು ದುಬೈನಿಂದ ಮುಂಬೈಗೆ ತೆರಳಿದ್ದು ಅಲ್ಲಿಂದ ಮಂಗಳೂರಿಗೆ ಬಂದು ಇನ್ನೂ ಕೊಚ್ಚಿಗೆ ಪ್ರಯಾಸ ಬೆಳೆಸಲಿದೆ. ಪ್ರವಾಸಿಗರಿಗೆ ಮಂಗಳೂರು ನಗರದ ಪ್ರವಾಸಿತಾಣಗಳನ್ನು ನೋಡಲು ಎನ್ಎಂಪಿಟಿ ವ್ಯವಸ್ಥೆ ಮಾಡಿದೆ.