ಮಲ್ಪೆ(Daijiworld News/MSP):: ಆಕಸ್ಮಿಕವಾಗಿ ಇಲಿ ಪಾಷಣದಲ್ಲಿ ಹಲ್ಲುಜ್ಜಿದ ಮಹಿಳೆಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ದಾರುಣ ಘಟನೆ ಕೊಡವೂರು ಗ್ರಾಮದ ಮಲ್ಪೆ ಕೊಳದ ಎಂಬಲ್ಲಿ ವರದಿಯಾಗಿದೆ.
ನ. 19 ರ ಬೆಳಗ್ಗೆ 5 ಗಂಟೆಗೆ ಲೀಲಾ ಕರ್ಕೆರಾ (57) ಎಂಬವರು ಟೂತ್ ಪೇಸ್ಟ್ ನ ಬದಲಾಗಿ ಕೈ ತಪ್ಪಿನಿಂದ Rat Poison Tube ನಿಂದ ಪೇಸ್ಟ್ ಎಂದು ತಿಳಿದು ಹಲ್ಲು ಉಜ್ಜಿದ್ದು ಪರಿಣಾಮ ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ನ.24ರಂದು ಮೃತಪಟ್ಟಿದ್ದಾರೆ.
ಈ ಬಗ್ಗೆ ಮೃತರ ತಮ್ಮ ನಾರಾಯಣ ಕರ್ಕೆರಾ ಎಂಬವರು ದೂರು ನೀಡಿದ್ದು. ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 49/2019 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.