ಉಡುಪಿ, ನ 22 (Daijiworld News/MSP): ಕರ್ತವ್ಯ ಲೋಪ ಆರೋಪದಲ್ಲಿ ಅಮಾನತಾಗಿದ್ದ ಉಡುಪಿ ನಗರ ಪೊಲೀಸ್ ಠಾಣೆಯ ಎಸ್.ಐ ಅನಂತಪದ್ಮನಾಭ ಅವರ ಅಮಾನತು ರದ್ದುಪಡಿಸಲಾಗಿದೆ.
ಅಜ್ಜರಕಾಡಿನ ಭುಜಂಗಪಾರ್ಕಿನಲ್ಲಿ ಯುವಕ ಯುವತಿಗೆ ಸಂಬಂಧಿಸಿದ ಹಲ್ಲೆ ಪ್ರಕರಣ ಬಗ್ಗೆ ರಾಜಿ ಪಂಚಾಯಿತಿಕೆ ನಡೆಸಿ ದೂರು ದಾಖಲಿಸದೆ, ಮಾಹಿತಿ ನೀಡದೆ ಕರ್ತವ್ಯ ಲೋಪದ ಅರೋಪದಲ್ಲಿ ಅನಂತಪದ್ಮನಾಭ ಅವರನ್ನು ಎಸ್ಪಿ ಅಮಾನತು ಮಾಡಿದ್ದರು. ಆ ಬಳಿಕ ಪ್ರಕರಣ ಐಜಿಪಿ ಅಂಗಳಕ್ಕೆ ಸೇರಿತ್ತು. ಈ ನಡುವೆ ಇವರ ಅಮಾನತು ಆದೇಶಕ್ಕೆ ಉಡುಪಿ ನಗರದ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಎಸ್ ಐ ಅಮಾನತು ರದ್ದು ಮಾಡಿ ಉಡುಪಿ ನಗರ ಠಾಣೆಯಲ್ಲೇ ಮುಂದುವರಿಸಲು ಒತ್ತಾಯಿಸಿದ್ದರು. ಐಜಿಪಿ ಅದೇಶ ಹಿಂತೆಗೆಯಲು ಸೂಚಿಸಿದ ಹಿನ್ನಲೆಯಲ್ಲಿ ಇದೀಗ ಅನಂತಪದ್ಮನಾಭ ಅವರನ್ನು ಡಿಸಿಆರ್ಬಿ (ಡಿಸ್ಟಿಕ್ ಕ್ರೈಂ ರೆಕೊರ್ಡ ಬ್ಯೂರೋ)ಗೆ ನಿಯುಕ್ತಿ ಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಹೆಡ್ ಕಾನ್ ಸ್ಟೇಬಲ್ ಜೀವನ್ ಕುಮಾರ್ ಅಮಾನತು ಮಾತ್ರ ಮುಂದುವರಿದಿದೆ.