ಮಂಗಳೂರು, ನ 22 (Daijiworld News/MSP): ನವ ಮಂಗಳೂರು ಬಂದರಿಗೆ ಈ ವರ್ಷದ ಮೂರನೇ ಐಷಾರಾಮಿ ಪ್ರವಾಸಿ ಹಡಗು ಗುರುವಾರ ಆಗಮಿಸಿದೆ.
ಸಿಲ್ವರ್ ಸ್ಪಿರಿಟ್ ಎಂಬ ಹೆಸರಿನ ಈ ಹಡಗಿನಲ್ಲಿ 450 ಪ್ರವಾಸಿಗರು ಮತ್ತು 300 ಸಿಬ್ಬಂದಿ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಕರಾವಳಿ ಜಾನಪದ ನೃತ್ಯದ ಮೂಲಕ ಸ್ವಾಗತಿಸಲಾಯಿತು. ಬೆಳಗ್ಗೆ 8.05 ಕ್ಕೆ ಮಂಗಳೂರಿನ ಬಂದರಿಗೆ ಆಗಮಿಸಿದ ಈ ಪ್ರವಾಸಿ ಹಡಗು ಸಂಜೆ 6 ಗಂಟೆಯವರೆಗೆ ಮಂಗಳೂರಿನಲ್ಲಿ ಇದ್ದು ಪ್ರವಾಸ ಮುಂದುವರಿಸಿದೆ. ಬಳಿಕ 250 ಪ್ರವಾಸಿಗರಿಗೆ ಮಂಗಳೂರು ನಗರದ ಪ್ರವಾಸಿತಾಣಗಳನ್ನು ನೋಡಲು ಎನ್ಎಂಪಿಟಿ ವ್ಯವಸ್ಥೆ ಮಾಡಿದೆ.
ಗೋವಾ ಪ್ರವಾಸ ಮುಗಿಸಿ ಬಂದ ಈ ಪ್ರವಾಸಿ ಹಡಗು ಮಂಗಳೂರಿನಿಂದ ಕೇರಳದ ಕೊಚ್ಚಿನ್ ಗೆ ಪ್ರಯಾಣ ಬೆಳೆಸಲಿದೆ.