ಬಂಟ್ವಾಳ: ನ 21 (DaijiworldNews/SM): ಶಾಲಾ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದ ಪೋಲೀಸ್ ತಂಡ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ. ಕಲ್ಲಡ್ಕ ಸಮೀಪದ ಬೋಳಂತೂರು ನಿವಾಸಿ ರಿಕ್ಷಾ ಚಾಲಕ ರಹೀಂ(26) ಆರೋಪಿಯಾಗಿದ್ದಾನೆ.
ಆರೋಪಿಯನ್ನು ಕಲ್ಲಡ್ಕದಿಂದ ಬಂಧಿಸಲಾಗಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಶಾಲಾ ಬಾಲಕಿ ಗುರುವಾರ ಬೆಳಿಗ್ಗೆ ತನ್ನ ಸ್ನೇಹಿತೆಗಾಗಿ ಪಂಚವಟಿ ವಾಣಿಜ್ಯ ಸಂಕೀರ್ಣದ ವರಾಂಡದಲ್ಲಿ ಕಾದು ಕುಳಿತಿದ್ದಳು. ಅದೇ ಸಮಯದಲ್ಲಿ ಇವಳು ಒಬ್ಬಳೇ ಇರುವುದನ್ನು ನೋಡಿದ ರಿಕ್ಷಾ ಚಾಲಕ ರಹೀಂ, ಬಾಲಕಿಯ ಬಳಿಕ ಬಂದು ಅವಳನ್ನು ತಬ್ಬಿಹಿಡಿದು ದೌರ್ಜನ್ಯ ಎಸಗಿದ್ದಾನೆ. ಆ ಸಂದರ್ಭ ಬಾಲಕಿ ಬೊಬ್ಬೆ ಹಾಕಿದ್ದು, ಸ್ಥಳೀಯರು ಅಗಮಿಸುವ ವೇಳೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.