ಉಡುಪಿ, ನ 20 (Daijiworld News/MB) : ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ನಡೆದಿದ್ದು ಈ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
1997ರ ಮೇ 20 ರಂದು ಮುಸ್ಲಿಂ ಸಂಪ್ರದಾಯದಂತೆ ಕುಂಜಿಬೆಟ್ಟುವಿನ ಸಾಜಿದಾ ಅಶ್ರಫ್ ಹಾಗೂ ಅಶ್ರಫ್ ಮೊಹಮ್ಮದ್ ಬಾಪು ಅವರ ವಿವಾಹವು ಕುದ್ರೋಳಿ ಮಸೀದಿಯಲ್ಲಿ ನಡೆದಿದ್ದು, ಮದುವೆಯಾದ ಸಮಯದಲ್ಲೇ ಆರೋಪಿ ಅಶ್ರಫ್ ಸಾಜಿದಾ ಅವರಿಗೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು.
ಪತಿಯು 10 ದಿನ ಮನೆಗೆ ಬರದ ಕಾರಣ ನವೆಂಬರ್ 17 ರಂದು ಮನೆಗೆ ಬಂದ ಪತಿಯನ್ನು ನೀವು ಇಷ್ಟು ದಿನ ಎಲ್ಲಿಗೆ ಹೋಗಿದ್ದೀರಿ? ಎಂದು ಪ್ರಶ್ನಿಸಿದಾಗ ಆರೋಪಿಯು ತಾನು ಸಮೀನಾ ಎಂಬವರನ್ನು ವಿವಾಹವಾಗಿದ್ದು ಅವರ ಮನೆಗೆ ಹೋಗಿದ್ದಾಗಿ ತಿಳಿಸಿ ಕಾನೂನೂ ಬಾಹಿರವಗಿ ಮೂರು ಬಾರಿ ತಲಾಖ್ ಎಂದು ಹೇಳಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರಿಗೆ ಇಬ್ಬರು ಮಕ್ಕಳು ಜನಿಸಿದ್ದಾರೆ.