ಮಂಗಳೂರು ಸೆ೧೫: ಚಿತ್ರ ರಸಿಕರಿಗೆ ಬೂಳ್ಯ ಕೊಟ್ಟು ಥಿಯೇಟರ್ ಗೆ ಕರಿತಾ ಇದ್ದಾರೆ, ಚಿತ್ರತಂಡ.ಸುಮ್ಮನೆ ಕರೀತಾ ಇಲ್ಲರೀ, ಚಿತ್ರ ನೋಡಿ ಪ್ರೋತ್ಸಾಹಿಸಿ ಅನ್ನುತ್ತಿದ್ದಾರೆ, ಇದೇ ವಾರ, ಚಿತ್ರ ರಸಿಕರನ್ನು ರಂಜಿಸಲು ತುಳುನಾಡಿನ ಸಂಸ್ಕೃತಿಯೊಂದಿಗೆ ಬೆರೆತುಕೊಂಡಂತಹ ಪಾರ್ದನ ಆದರಿಸಿದ, ಸಿನಿಮಾ ನೇಮದ ಬೂಳ್ಯ ತೆರೆಗೆ ಬರ್ತಾ ಇದೆ. ಕುದ್ರಾಡಿ ಕುಲದೇವತಾ ಕ್ರೀಯೆಷನ್ ಬ್ಯಾನರ್ನಡಿ, ಕದ್ರಾಡಿಗುತ್ತು ಚಂದ್ರಶೇಖರ್ ಮಾಡಾ ನಿರ್ಮಿಸಿರುವ ಚಿತ್ರ ನೇಮೊದ ಬೂಳ್ಯ. ಚಿತ್ರ ಇದೇ ಸೆ 22 ರಂದು ತೆರೆಗೆ ಬರಲಿದೆ. ನಮ್ಮ ತುಳುನಾಡಿನಲ್ಲಿ 200ವರ್ಷಗಳ ಹಿಂದೆ, ಅಂದರೆ ಈಗಿನ ಪುತ್ತೂರಿನ ಬೆಟ್ಟಂಪಾಡಿಯಲ್ಲಿ ಪರತಿ ಮಂಗಣೆ ಎನ್ನೋ ಸಾಮಾನ್ಯ ಹೆಣ್ಣುಮಗಳ ಜೀವನದಾರಿತ ನೈಜ ಕಥೆಯನ್ನ ಆಧರಿಸಿ ಈ ಚಿತ್ರವನ್ನ ನಿರ್ಮಿಸಲಾಗಿದೆ.
ಊರಿನ ಬಲ್ಲಾಳನ ಕಾಮುಕ ದೃಷ್ಟಿ ಮತ್ತು ತನ್ನ ಪ್ರೀತಿಯ ಪತಿಯನ್ನೇ ಕೊಂದ ಬಲ್ಲಾಳ ವಿರುದ್ದ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಎನ್ನೋದೇ ಚಿತ್ರದ ಕಥಾ ಹಂದರ.. ಚಿತ್ರದಲ್ಲಿ ಒಟ್ಟು ೫ ಹಾಡುಗಳಿದ್ದು ಎಲ್ಲವೂ ಕಡಲನಗರಿ ಹಸಿರಸಿರಿಯಲ್ಲಿ ಚಿತ್ರೀಕರಿಸಲಾಗಿದ್ದು ಅದ್ಭುತವಾಗಿ ಮೂಡಿ ಬಂದಿದೆ. 32 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಕಾರ್ಕಳ, ನಿಟ್ಟೆ, ಕೆಮ್ಮಣ್ಣು ಮುಂತಾದ ಗ್ರಾಮಿಣ ಪರಿಸರದಲ್ಲಿ ಮಾಡಿದ್ದಾರೆ.ಇನ್ನು ಸೆನ್ಸಾರ್ ಮಂಡಳಿಯಿಂದ ಕತ್ತರಿ ಪ್ರಯೋಗಕ್ಕೆ ಒಳಗಾಗದೆ, ಉತ್ತಮ ಸಟೀಫಿಕೇಟ್ ಪಡೆದುಕೊಂಡಿದ್ದು ಚಿತ್ರಕ್ಕೆ ಇನ್ನೊಂದು ಪ್ಲಸ್ ಪಾಯಿಂಟ್. ಕಳೆದ ವರ್ಷದ ಜೂನ್ನಲ್ಲೇ ದ್ವನಿಸುರುಳಿಯನ್ನ ಬಿಡುಗಡೆ ಮಾಡಿದ್ದ ಚಿತ್ರ ತಂಡ ಥಿಯೇಟರ್ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ಮಾಡಲು ಇಲ್ಲಿಯವರೆಗೆ ತಾಳ್ಮೆಯಿಂದ ಕಾಯಬೇಕಾಗಿ ಬಂದಿದ್ದು ಸುಳ್ಳಲ್ಲ. ಇನ್ನು ಸಿನಿಮಾಕ್ಕೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಖ್ಯಾತ ರಂಗಕರ್ಮಿ ಬಿ.ಕೆ.ಗಂಗಾದರ್ ಕಿರೋಡಿಯನ್ ಅವರದ್ದು. ಚಿತ್ರದ ಪ್ರಮುಖ ಭೂಮಿಕೆಯಲ್ಲಿ, ಕನ್ನಡದ ಕಿರುತೆರೆ ನಟಿ ರಜನಿ,ಪರತಿಯಾಗಿ, ಮೈಂದನಾಗಿ ಪ್ರೀತಮ್ ಶೆಟ್ಟಿ , ಪ್ರದೀಪ್ ಚಂದ್ರ ಉಡುಪಿ, ಅಣ್ಣಪ್ಪ ಬಳ್ಳಾಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ರಮೇಶ್ ಭಟ್, ಮಂಡ್ಯ ರಮೇಶ್ ಮುಂತಾರವರ ತಾರಾಗಣವಿದೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ವಿ. ಮನೋಹರ್ ಸಾಹಿತ್ಯ ಮತ್ತು ಸಂಗೀತ ಒದಗಿಸಿದ್ದಾರೆ. ಛಾಯಗ್ರಹಣ ಉಮಾಪತಿ ಹಾಗೂ ಸಂಕಲನ ಪ್ರಕಾಶ್ ಕಾರಿಂಜ ಅವರದ್ದು. ಏನೇ ಆಗಲಿ ಚಿತ್ರಕ್ಕೊಂದು ಆಲ್ ದಿ ಬೆಸ್ಟ್ ಹೇಳೋಣ.