ಕಡಬ, ನ 20 (Daijiworld News/MSP): ಪುತ್ತೂರಿನಿಂದ ಎಡಮಂಗಲಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕುತ್ತಿಗೆ ಹಿಡಿದು ಕಿರುಕುಳ ನೀಡಿದ ಆರೋಪಿ ಕಡಬ ತಾಲೂಕಿನ ಕೊಂಬಾರು ಗ್ರಾಮದ ಬೊಟ್ಟಡ್ಕದ ನಿವಾಸಿ ಸತೀಶ್ ಎಂಬಾತನನ್ನು ರೈಲ್ವೇ ಸಿಬಂದಿ ಹಾಗೂ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನ.19 ರ ಮಂಗಳವಾರ ನಡೆದಿದೆ. ಆರೋಪಿಯ ವಿರುದ್ದ ಮಹಿಳೆ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸಮಾಡುತ್ತಿರುವ ಆಶಾ ಮೋಹನ್ ಅವರು ಮಂಗಳವಾರ ಮಧ್ಯಾಹ್ನ ಎಡಮಂಗಲದಲ್ಲಿರುವ ತನ್ನ ಮಾವನ ಮನೆಗೆ ರೈಲಿ ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಸವಣೂರು ಸಮೀಪ ತಲುಪು ತ್ತಿದ್ದಂತೆಯೇ ಅದೇ ಬೋಗಿಯಲ್ಲಿದ್ದ ಯುವಕನೋರ್ವ ಎದ್ದು ಬಂದು ಆಶಾ ಅವರ ಕುತ್ತಿಗೆಗೆ ಕೈ ಹಾಕಿ ಹಿಸುಕಿದ್ದಾನೆ.
ಈ ಹಠಾತ್ ಬೆಳವಣಿಗೆಯಿಂದ ಜೀವಭಯದಿಂದ ಮಹಿಳೆ ಬ್ಬೆ ಹೊಡೆದಾಗ ರೈಲ್ವೇ ಸಿಬಂದಿ ಹಾಗೂ ಸಹ ಪ್ರಯಾಣಿಕರು ಬಂದು ಆರೋಪಿಯನ್ನು ಹಿಡಿದ್ದಾರೆ. ಆರೋಪಿಯನ್ನು ನೆಟ್ಟಣರೈಲು ನಿಲ್ದಾ ಣದಲ್ಲಿ ಹಿಡಿದಿಟ್ಟು ಕಡಬ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಕಡಬ ಪೊಲೀಸರು ಮಹಿಳೆಯ ದೂರಿನಂತೆ ಆರೋಪಿಯನ್ನು ವಶಕ್ಕೆ ಪಡೆದರು.
ಆರೋಪಿ ಸತೀಶ್ ಮಾನಸಿಕ ಅಸ್ವಸ್ಥನಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿ 4 ದಿನಗಳ ಹಿಂದೆಯಷ್ಟೇ ಮನೆಗೆ ಕರೆತರಲಾಗಿತ್ತು. ಸೋಮವಾರ ಬೆಳಗ್ಗೆ ಮನೆಯಿಂದ ತಪ್ಪಿಸಿಕೊಂಡಿದ್ದ ಈತ ಈ ಕೃತ್ಯವೆಸಗಿದ್ದ. ಸತೀಶನ ತಾಯಿ ಆತನ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಕಾಗದಪತ್ರಗಳೊಂದಿಗೆ ಕಡಬ ಠಾಣೆಗೆ ಆಗಮಿಸಿ ಮಾಹಿತಿ ನೀಡಿದ್ದಾರೆ.