ಮಂಗಳೂರು, ನ 20 (Daijiworld News/MSP): ದೇಶದ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪನ್ನು ಜನ ಸ್ವಾಗತಿಸುತ್ತಾರೆ. ಆದರೆ ಸುಪ್ರೀಂಕೋರ್ಟ್ ಅನರ್ಹ ಎಂದು ಗುರುತಿಸಿದವರಿಗೆ ಬಿಜೆಪಿ ಪಕ್ಷವೂ ಟಿಕೆಟ್ ನೀಡಿ ಚುನಾವಣೆ ಕಣಕ್ಕಿಳಿಸಿದೆ. ಇಂತಹ ಅನರ್ಹರಿಗೆ ಮುಂದಿನ ದಿನಗಳಲ್ಲಿ ಜನರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ಯು ಟಿ ಖಾದರ್ ಹೇಳಿದ್ದಾರೆ.
ನಗರದಲ್ಲಿ ನ.20 ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, " ಮತದಾರರು ಬುದ್ಧಿವಂತರಾಗಿದ್ದಾರೆ. ಸುಪ್ರೀಂ ಕೋರ್ಟ್ ಜನತಾ ನ್ಯಾಯಾಲಯಕ್ಕೆ ತೀಪು ನೀಡಲು ಈ ಅವಕಾಶ ನೀಡಿದೆ. ಅಲ್ಲಿನ ಮತದಾರ ಅನರ್ಹ ಯಾವ ರೀತಿ ಪಾಠ ಕಲಿಸುತ್ತಾರೆ ಎಂದು ದೇಶದ ಜನರೆಲ್ಲಾರೂ ಎದುರು ನೋಡುತ್ತಿದ್ದಾರೆ ಎಂದರು.
ಈ ಉಪಚುನಾವಣೆ ಕರ್ನಾಟಕದ ಮತದಾರರಿಗೆ ಅಗ್ನಿ ಪರೀಕ್ಷೆಯಾಗಿದೆ. ಅನರ್ಹರಿಗೆ ಜನ ಗೌರವಕೊಡ್ತಾರೋ..? ಜನರಿಗೆ ವಂಚನೆ ಮಾಡಿದವರನ್ನು ಜನ ಮತ್ತೆ ಆರಿಸುತ್ತಾರೋ ? ಎನ್ನುವ ಕೂತೂಹಲ ಎಲ್ಲರದ್ದೂ. ಮತದಾರರೂ ಅನರ್ಹರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಯು ಟಿ ಖಾದರ್ ಹೇಳಿದರು.