ಮಂಗಳೂರು, ನ 20 (Daijiworld News/MB) : ದುಬೈನಿಂದ ಮಂಗಳೂರಿಗೆ ಪೇಸ್ಟ್ ರೂಪದಲ್ಲಿ 483.57 ಗ್ರಾಂ ಅಕ್ರಮ ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕಸ್ಷಮ್ಸ್ ಅಧಿಕಾರಿಗಳು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಅಕ್ರಮ ಚಿನ್ನ ಸಾಗಾಟ ಮಾಡಲಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ 24 ಕ್ಯಾರೆಟ್ ಪರಿಶುದ್ಧತೆಯ ಸುಮಾರು 18.47 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಆರೋಪಿಯು ಚಿನ್ನವನ್ನು ಪೇಸ್ಟ್ ರೂಪದಲ್ಲಿ 3 ಪ್ಯಾಕೆಟ್ಗಳಲ್ಲಿ ಗುದನಾಳದಲ್ಲಿಟ್ಟು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಆತನನ್ನು ಕೂಡಲೇ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಯು ತಾನು ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ.
ಅಧಿಕಾರಿಗಳು ಅಕ್ಟೋಬರ್ 12ರಂದು 524.78 ಗ್ರಾಂ, ನವೆಂಬರ್ 4ರಂದು 9.65 ಲಕ್ಷರೂಪಾಯಿ ಮೌಲ್ಯದ 252.98ಗ್ರಾಂ ಚಿನ್ನವನ್ನು ಪ್ಲೇಟ್ ರೂಪದಲ್ಲಿ ಅಕ್ರಮ ಸಾಗಾಟ ಮಾಡುತ್ತಿದ್ದ ಪ್ರಯಾಣಿಕರನ್ನು ವಶಕ್ಕೆ ಪಡೆದಿದ್ದರು.