ಉಡುಪಿ, ನ 19 (DaijiworldNews/SM): ಈ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಪೌಷ್ಟಿಕ ಆಹಾರದ ಕೊರತೆ ಕಾಣುತ್ತಿದೆ. ಈ ದೇಶದಲ್ಲಿ ಕೆಲವು ಕುಟುಂಬಕ್ಕೆ ತಮಗೆ ಎಷ್ಟು ಮಕ್ಕಳಿದ್ದಾರೆಂಬುದೇ ಗೊತ್ತಿಲ್ಲ. ಮಗುವನ್ನು ಹೆರುದಷ್ಟೇ ಅವರ ಕೆಲಸ. ಮಕ್ಕಳಿಗೆ ಆಹಾರ ಕೊಡುವುದಕ್ಕೆ ಶಕ್ತರಲ್ಲದಿದ್ದರೆ ಅಷ್ಟು ಮಕ್ಕಳನ್ನ ಯಾಕೆ ಹೆರಬೇಕು? ಎಂದು ಯೋಗಗುರು ಬಾಬಾರಾಮ್ ದೇವ್ ಪ್ರಶ್ನಿಸಿದರು.
ನಮ್ಮ ದೇಶದಲ್ಲಿ ಸಂಪತ್ತು ಸೀಮಿತವಾಗಿದೆ, ಜನಸಂಖ್ಯೆ ಅಪಾರವಾಗಿದೆ. ಹೀಗಾದರೆ ದೇಶದಲ್ಲಿ ಸಮತೋಲನ ಇರುವುದಿಲ್ಲ. ಹಾಗಾಗಿ ದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರುವುದು ಅಗತ್ಯವಿದೆ ಎಂದು ಬಾಬಾ ರಾಮ್ದೇವ್ ಹೇಳಿದರು. ಅವರು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಯವರ ನೇತ್ರತ್ವದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮಂಗಳವಾರ ನಡೆದ 'ಸಂತರ ಸಮಾಗಮ' ಕಾರ್ಯಕ್ರಮ ದಲ್ಲಿ ಮಾತನಾಡಿದರು. ಹಿಂದೆ ಅಕ್ಬರ್, ಬಾಬರ್ ಔರಂಗ ಜೆಬ್ ನ ಕಾಲದಲ್ಲೂ ಗೋ ಹತ್ಯೆ ನಿಷೇಧವಿತ್ತು. ಆದರೆ ಈಗ್ಯಾಕೆ ಇಲ್ಲ? ಸರಕಾರ ಅದನ್ನು ನಿಷೇಧಿಸುವಂತೆ ಒತ್ತಾಯ ಹೇರಬೇಕು ಎಂದು ಹೇಳಿದರು.
ಬಹುಜನ ಪಕ್ಷದವರು ಮೂಲನಿವಾಸಿಗಳೆಂದು, ಬ್ರಾಹ್ಮಣರು ವಿದೇಶಿಗರೆಂದು ಭಾವನೆ ಇದೆ. ಆದರೆ, ಭಾರತದಲ್ಲಿ ಜನಿಸಿದವರೆಲ್ಲರೂ ಭಾರತೀಯರು ಎಂದು ಬಾಬಾ ಹೇಳಿದರು. ತಾನು ಆಧ್ಯಾತ್ಮ ವಾದ ಮತ್ತು ರಾಷ್ಟ್ರೀಯ ವಾದವನ್ನು ಎತ್ತಿ ಹಿಡಿಯುತ್ತೇನೆ ಎಂದು ಬಾಬಾ ರವರು ಹೇಳಿದರು. ಈ ಸಂತ ಸಮಾಗಮದಲ್ಲಿ, ಗೋಹತ್ಯೆ ನಿಷೇಧ ಮತ್ತು ಅದರ ರಕ್ಷಣೆ, ಜನಸಂಖ್ಯೆ ನಿಯಂತ್ರಣ ಮತ್ತು ಸಮಾನ ನಾಗರೀಕ ಸಂಹಿತೆ ದೇಶದಲ್ಲಿ ಅನುಷ್ಠಾನ ಮಾಡುವಂತೆ ಭಾರತ ಸರ್ಕಾರಕ್ಕೆ ಆಗ್ರಹಿಸುವಂತೆ ಈ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.