ಉಡುಪಿ, ನ 19 (DaijiworldNews/SM): ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಯೋಧ್ಯೆ ತೀರ್ಪಿನ ಬಗ್ಗೆ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಿರುವ ಕುರಿತು ಉಡುಪಿಯಲ್ಲಿ ಯೋಗಗುರು ಬಾಬಾರಾಮ್ ದೇವ್ ಪ್ರತಿಕ್ರಿಯೆ ನೀಡಿದ್ದಾರೆ.
"ಮರುಪರಿಶೀಲನೆ ಅರ್ಜಿ ಸಲ್ಲಿಸುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಅಯೋಧ್ಯೆ ತೀರ್ಪಿನ ಬಗ್ಗೆ ಎಲ್ಲಾ ನ್ಯಾಯಧೀಶರು ಏಕ ಮತದ ನಿರ್ಣಯ ಕೈಗೊಂಡಿದ್ದಾರೆ. ಈ ತೀರ್ಪಿನ ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಲಾ ಬೋರ್ಡ್ ಗೆ ಅವಕಾಶ ಇದೆ. ಆದರೆ ಇದರಿಂದ ಸುಪ್ರಿಂ ಕೋರ್ಟ್ ನ ತೀರ್ಪನ್ನು ಒಪ್ಪಲು ಲಾ ಬೋರ್ಡ್ ತಯಾರಿಲ್ಲ ಎಂಬ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದರು.
ಇನ್ನು ಮಂಗಳೂರಿನ ಪ್ರೊಫೆಸ್ರರ್ ನರೇಂದ್ರ ನಾಯಕ್ ಅವರು ತುಳಸಿಯಿಂದ ರೇಡಿಯೇಶನ್ ತಡೆಗಟ್ಟಲು ಸಾಧ್ಯವಿಲ್ಲ ಎಂಬ ವಾದಕ್ಕೆ ಪ್ರತಿಕ್ರಿಯೆ ನೀಡಿದ ಬಾಬಾ ರಾಮ್ ದೇವ್, "ಈ ಕುರಿತಾಗಿ ಯಾರು ಕೂಡಾ ಪ್ರಯೋಗವನ್ನು ಮಾಡಬಹುದು. ತುಳಸಿ, ಗೋವಿಗೆ ಸಂಬಂಧಿಸಿದ ವಿಷಯಗಳನ್ನು ತಂದಾಗ ಕೆಲವರು ದುರುದ್ದೇಶಕ ಪೂರಕವಾಗಿ ವಿವಾದಗಳನ್ನುಂಟು ಮಾಡುತ್ತಾರೆ.
ಆದರೆ, ನಾನು ಯಾವುದೇ ಅಂಧವಿಶ್ವಾಸ, ಜಾತಿವಾದ ಧರ್ಮಾಂಧತೆಯನ್ನು ಬೆಂಬಲಿಸುವುದಿಲ್ಲ. ಇದನ್ನು ಕಂಡಾಗ ಖಂಡಿಸುತ್ತೇನೆ. ತುಳಸಿಯಲ್ಲೂ ರೇಡಿಯೇಷನ್ ತೆಡೆಯುವ ಗುಣವಿದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದ್ದು, ಇದನ್ನು ಯಾರೂ ಕೂಡ ಆಧ್ಯಾತ್ಮಿಕ ನೆಲೆಯಲ್ಲಿ ಮಾಡಿ ನೋಡಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ಇದಕ್ಕೆ ಸಮಯಾವಕಾಶ ತಗಲುತ್ತದೆ. ಇದನ್ನು ನಾನು ಪ್ರಯೋಗಿಕವಾಗಿ ಸಾಬೀತುಪಡಿಸಿದ್ದೇನೆ ಎಂದು ಬಾಬಾ ರಾಮ್ ದೇವ್ ಪ್ರತಿಕ್ರಿಯೆ ನೀಡಿದ್ದಾರೆ.