ಉಡುಪಿ, ನ 19(Daijiworld News/MB): ಬಾಲಕನಿಗೆ ಗಾಂಜಾ ನೀಡಿ ಆತನಲ್ಲಿ ಗಾಂಜಾ ಮಾರಾಟ ಮಾಡುವಂತೆ ಒತ್ತಾಯ ಮಾಡಿದ್ದ ವ್ಯಕ್ತಿಯನ್ನು ನವೆಂಬರ್ 18 ರ ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಮಹಮ್ಮದ್ ಖಾಸಿಂ ಯಾನೆ ಉಬೇದ್ ಮಲ್ಲಾರು ಕೋಟೆ ರಸ್ತೆ ಬಳಿಯ ನಿವಾಸಿಯಾಗಿದ್ದು, ಪೊಲೀಸರು ಆತನಿಂದ 180 ಗ್ರಾಂ ಗಾಂಜಾವನ್ನು ವಶಪಡೆದುಕೊಂಡಿದ್ದಾರೆ.
ಪೊಲೀಸರು ಆತನ ಬಳಿ ಇದ್ದ ಬೈಕ್ ಒಂದನ್ನು ತಪಾಸಣೆ ಮಾಡಿದ್ದು ಆ ಬೈಕ್ ಅನ್ನು ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಎಂದು ತಿಳಿದುಬಂದಿದೆ.
7 ದಿನಗಳ ಹಿಂದೆ ಕಾಪು ಪಡುಗ್ರಾಮದ ಬಾಲಕ ಮನೆ ಬಿಟ್ಟು ಹೋಗಿದ್ದು ನವೆಂಬರ್ 16 ರ ಶನಿವಾರ ಮಲ್ಲೂರಿನಲ್ಲಿ ಪತ್ತೆಯಾಗಿದ್ದ. ಉಬೇದ್ ತನ್ನನ್ನು ಪುಸಲಾಯಿಸಿ ನವೆಂಬರ್ 14 ರ ಗುರುವಾರ ಉಡುಪಿಗೆ ಕರೆದೊಯ್ದಿದ್ದು ಅಲ್ಲಿಂದ ಉದ್ಯಾವರ ಬೊಳ್ಜೆ ರೇಲ್ವೇ ಟ್ರಾಕ್ ಬಳಿ ಸಿಗರೇಟ್ ನಲ್ಲಿ ಗಾಂಜಾ ಹಾಕಿ ಸೇದಲು ಒತ್ತಾಯಿಸಿ ಗಾಂಜಾ ಸೇಸುವಂತೆ ಮಾಡಿದ್ದ ಎಂದು ಬಾಲಕ ಮನೆಯಲ್ಲಿ ತಿಳಿಸಿದ್ದಾನೆ.
ಬಾಲಕನ ತಾಯಿ ನೀಡಿದ ದೂರಿನಂತೆ ಎಸ್ ಐ ರಾಜಶೇಖರ್ ಬಿ. ಸಾಗನೂರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.