ಬಂಟ್ವಾಳ, ನ 17 (Daijiworld News/MB): ಬಂಟ್ವಾಳ ತಾಲೂಕಿನ ತಲಪಾಡಿ ಸಮೀಪದ ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹವೊಂದು ಇಂದು ಪತ್ತೆಯಾಗಿದೆ.
ಅಪರಿಚಿತ ಮೃತದೇಹ ಗಂಡಸಿನದಾಗಿದ್ದು , ಸುಮಾರು 35 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ.
ಇಂದು ಬೆಳಗ್ಗೆ ಕೆಲಸಗಾರರು ಮರಳು ಡ್ರೆಜ್ಜಿಂಗ್ ಕೆಲಸ ಮಾಡುತ್ತಿರುವಾಗ ತುಂಬೆ ಡ್ಯಾಂ ಸಮೀಪದ ತಲಪಾಡಿಯ ನೇತ್ರಾವತಿ ನದಿಯಲ್ಲಿ ಕಾರ್ಯಾಚರಿಸುತ್ತಿರುವ ಮರಳು ಡ್ರೆಜ್ಜಿಂಗ್ ಯಂತ್ರದ ಸಮೀಪ ಮೃತದೇಹವನ್ನು ಕಂಡಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರಾದ ಈಜುಗಾರರಾದ ಮುಹಮ್ಮದ್ ಅಲಿ, ರಿಯಾಝ್ ನೌಫಲ್, ಪುತ್ತುಮೋನು, ಶಾಹುಲ್ ಹಮೀದ್, ನವಾಝ್, ಲತೀಫ್ ಬಿ.ಸಿ., ಕಮರುದ್ದೀನ್, ಪೊಲೀಸ್ ಸಿಬ್ಬಂದಿ ಕೇದರ್ ಮೇತದೇಹವನ್ನು ಮೇಲೆತ್ತಿದ್ದಾರೆ.
ಈ ಕುರಿತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.