ಮಂಗಳೂರು, ನ 17 (Daijiworld News/MB): ಅಯೋಧ್ಯೆ ತೀರ್ಪಿನಿಂದ ಮುಸ್ಲಿಮರಿಗೆ ಅನ್ಯಾಯವಾಗಿದೆ ಎಂಬ ವಿಷಯವಿರುವ ಕರಪತ್ರವನ್ನು ಹಂಚಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ನವೆಂಬರ್ 16 ರ ಶನಿವಾರ ತಡರಾತ್ರಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಸಿನಾನ್ (21) ಮತ್ತು ಹಕೀಂ(26) ಕೆ.ಸಿ.ರೋಡ್ ನಿವಾಸಿಗಳಾಗಿದ್ದು, ಎಸ್ಡಿಪಿಐ ಕಾರ್ಯಕರ್ತರು ಎಂದು ಹೇಳಲಾಗಿದೆ.
ಆರೋಪಿಗಳು ಅಯೋಧ್ಯೆ ತೀರ್ಪಿನಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿದೆ ಎಂದು ಮುದ್ರಿಸಿರುವ ಕರಪತ್ರಗಳನ್ನು ಕೆ.ಸಿ.ರೋಡ್ ಸಮೀಪದ ಮನೆಗಳಿಗೆ ಹಂಚುತ್ತಿದ್ದು ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರನ್ನು ಬಂಧಿಸಿ, ಅವರಲ್ಲಿದ್ದ ಕರಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.