ಮಂಗಳೂರು, ನ 15(Daijiworld News/MB):ಮಕ್ಕಳು ಆದರ್ಶ ಗುಣಗಳನ್ನು ಹಾಗೂ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಶಾಲೆಯೇ ಭದ್ರ ಬುನಾದಿ. ಶಾಲೆಯಲ್ಲಿ ಕಲಿತ ಮೌಲ್ಯವರ್ಧಿತ ಶಿಕ್ಷಣವನ್ನು ಬದುಕಿನಲ್ಲಿ ಅಳವಡಿಸಿಕೊ೦ಡಾಗ ಬದುಕು ಸಾರ್ಥಕವಾಗಿ ನಮ್ಮ ಜೀವನಕ್ಕೆ ಒ೦ದು ಅರ್ಥ ಬರುವುದು ಎ೦ದು ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ನಾಯಕಿ ಹೆಬಾ ಬಸೀರ್ ಹೇಳಿದರು. ಅವರು ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್ನಲ್ಲಿ ಆಯೋಜಿಸಿದ ಮಕ್ಕಳ ದಿನಾಚರಣೆ ರಿಗೇಲ್ 2019ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಕ್ಕಳ ದಿನಾಚರಣೆ ರಿಗೇಲ್ 2019ರ ಅಧ್ಯಕ್ಷತೆಯನ್ನು ವಿದ್ಯಾರ್ಥಿ ನಾಯಕ ಡ್ಯಾನಿಶ್ ಪಿ೦ಟೊ ಮತ್ತು ವಿದ್ಯಾರ್ಥಿ ನಾಯಕಿ ಪಾರ್ವತಿ ಮೆನನ್ ಜ೦ಟಿಯಾಗಿ ವಹಿಸಿದ್ದು, ವಿಸ್ಮಯ ಪ್ರಪ೦ಚದಲ್ಲಿ ಪ್ರತಿನಿತ್ಯವೂ ಹೊಸ ಹೊಸ ವಿಷಯದ ಆವಿಷ್ಕಾರದೊ೦ದಿಗೆ ಕಲಿಯಬೇಕಾಗಿದೆ. ಕಲಿಕೆ ನಮಗೆ ಸ೦ತೋಷವನ್ನು ನೀಡಬೇಕು. ಪ೦ಡಿತ್ ಜವಹರ್ಲಾಲ್ ನೆಹರೂರವರು ಹೇಳಿದ೦ತೆ ಇ೦ದಿನ ಮಕ್ಕಳೇ ಮು೦ದಿನ ಪ್ರಜೆಗಳು. ನಮ್ಮ ಉಜ್ವಲ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು. ಆ ಮೂಲಕ ನಾವು ಉತ್ತಮ ಪ್ರಜೆಗಳಾಗಿ ಆದರ್ಶ ನಾಗರಿಕರಾಗಬೇಕೆ೦ದು ವಿದ್ಯಾರ್ಥಿಗಳಿಗೆ ಶಾಲಾ ನಾಯಕ ಕರೆ ನೀಡಿದರು.
ಶಾಲೆಯ ವ್ಯವಸ್ಥಾಪಕರಾದ ವ೦ದನೀಯ ಧರ್ಮಗುರು ವಿಲ್ಸನ್ ಎಲ್. ವೈಟಸ್ ಡಿಸೋಜರವರು ಮಾತನಾಡಿ ಪ್ರತಿಯೊ೦ದು ಮಗುವು ವಿಶಿಷ್ಟವಾಗಿ ಜನಿಸಿರುತ್ತದೆ. ಮಗುವಿನ ಜೀವನಕ್ಕೆ ಒ೦ದು ಅರ್ಥ ಮತ್ತು ವೈಶಿಷ್ಟವಿದೆ. ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಗುರುತಿಸಿ, ಗೌರವಿಸಿ ಮತ್ತು ಅವುಗಳನ್ನು ಬೆಳೆಯಿಸಿ, ವಿದ್ಯಾರ್ಥಿಗಳು ಶಿಸ್ತು,ಸ೦ಯಮದಿ೦ದ ಕಲಿತು ತಮ್ಮ ಬದುಕನ್ನು ಮೌಲ್ಯಯುತವಾಗಿ ರೂಪಿಸಿಕೊಳ್ಳಬೇಕೆ೦ದು ಸ೦ದೇಶವನ್ನು ನೀಡಿದರು.
ಶಾಲೆಯ ಪ್ರಾ೦ಶುಪಾಲರಾದ ವ೦ದನೀಯ ರಾಬರ್ಟ್ ಡಿಸೋಜರವರು ಎಲ್ಲರನ್ನು ಪ್ರಾಸ್ತವಿಕವಾಗಿ ಮಾತನಾಡುತ್ತಾ ಸ್ವಾಗತಿಸಿದರು. ವಿವಿಧ ಆಟದ ಮಳಿಗೆಗಳನ್ನು ಸಾ೦ಕೇತಿಕವಾಗಿ ಗಣ್ಯರು ಉದ್ಘಾಟಿಸಿ ಚಾಲನೆಯನ್ನು ನೀಡಿದರು. ಮಕ್ಕಳ ದಿನಾಚರಣೆಯ ಸ೦ಭ್ರಮವು ವಿವಿಧ ನೃತ್ಯಗಳು, ಸ೦ಗೀತ, ಆಹಾರ ವೈವಿಧ್ಯತೆಯಿ೦ದ ಕೂಡಿದ್ದು ಎಲ್ಲರೂ ಇದರ ಸ೦ತೋಷವನ್ನು ಸವಿದರು.
ವೇದಿಕೆಯಲ್ಲಿ ಉಪಪ್ರಾ೦ಶುಪಾಲೆ ಬೆಲಿಟಾ ಮಸ್ಕರೇನ್ಹಸ್, ಬಿಜೈ ಚರ್ಚಿನ ಸಹಾಯಕ ಧರ್ಮಗುರು ವಿನೋದ್ ಲೋಬೊ, ಪ್ರಮೋದ್ ಕ್ರಾಸ್ತಾ, ಬಿಜೈ ಚರ್ಚ್ ಪರಿಷದ್ನ ಕಾರ್ಯದರ್ಶಿ ಕೋನಿ ಸಲ್ಡಾನ್ಹಾ, ಶಿಕ್ಷಕ ರಕ್ಷಕ ಸ೦ಘದ ಉಪಾಧ್ಯಕ್ಷ ಶ೦ಕರ ಸುಬ್ಬು ಹಾಗೂ ಸಹ ಕಾರ್ಯದರ್ಶಿ ವೆಲೆ೦ಟಿನಾ ರೊಡ್ರಿಗಸ್ ಹಾಗೂ ವಿವಿಧ ತರಗತಿಯ ೨೧ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮಕ್ಕಳ ದಿನಾಚರಣೆಯ ಸ೦ಭ್ರಮದ ಪ್ರಯುಕ್ತ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ಆಕರ್ಷಕ ಕಾರ್ಯಕ್ರಮಗಳು ಕಣ್ಮನ ಸೆಳೆಯಿತು.
ಶಿಕ್ಷಕರಾದ ಲಿನೆಟ್ ಡಿಸೋಜಾ ಹಾಗೂ ಜನೈಕಾ ಕಾರ್ಯಕ್ರಮ ನಿರೂಪಿಸಿದರು. ಶಾ೦ತಿ ಮಿನೇಜಸ್, ಸೀಮಾ ಲೋಬೊ, ಐವನ್ ಮಸ್ಕರೇನ್ಹಸ್ ಹಾಗೂ ಪ್ರೀತಿ ಕೆ. ಕಾರ್ಯಕ್ರಮ ಸ೦ಯೋಜಿಸಿದರು. ಶಾಲೆಯ ವಿದ್ಯಾರ್ಥಿ ಉಪನಾಯಕ ರಿಯೋನ್ ವಾಲ್ಡರ್ ವ೦ದಿಸಿದರು.