ಬೆಂಗಳೂರು ಜ 11 : ಭಾಗ್ಯ ಹೆಸರಿನ ಯೋಜನೆಗಳಿಂದಲೇ ಫೇಮಸ್ ಆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಚುನಾವಣೆ ಹತ್ತಿರ ಬರ್ತಾ ಇದ್ದಂತೆ ಮತ್ತೊಂದು ಹೊಸ ಯೋಜನೆ ಜನರಿಗೆ ನೀಡಲು ಚಿಂತಿಸಿದೆ. ಅನ್ನಭಾಗ್ಯ, ಶಾದಿ ಭಾಗ್ಯ, ಕ್ಷೀರ ಭಾಗ್ಯ, ಆರೋಗ್ಯ ಭಾಗ್ಯ ಯೋಜನೆಗಳಂತೆ ಇದೀಗ ವಸ್ತ್ರ ಭಾಗ್ಯ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ. ಪಡಿತರ ಚೀಟಿ ಮೂಲಕ ಬಡ ಜನರಿಗೆ ವಸ್ತ್ರವನ್ನು ಉಚಿತವಾಗಿ ನೀಡಲು ಸರಕಾರ ಯೋಚಿಸಿದೆ. ಪುರುಷರಿಗೆ ಒಂದು ಪಂಚೆ ಮತ್ತು ಶರ್ಟ್ ಬಟ್ಟೆ ಹಾಗೂ ಮಹಿಳೆಯರಿಗೆ ಒಂದು ಸೀರೆ ಮತ್ತು ರವಿಕೆ ಬಟ್ಟೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಹಯೋಗದೊಂದಿಗೆ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಮೂಲಕ ಯೋಜನೆ ಜಾರಿಗೆ ತರಲು ಯೋಚಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ವಾರ್ಷಿಕ 550 ಕೋಟಿ ರೂಪಾಯಿ ಅಗತ್ಯವಿದ್ದು ಈ ಯೋಜನೆಯನ್ನು 2018-19 ನೇ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಲು ಸರ್ಕಾರ ತನ್ನ ಸಿದ್ದತೆ ಆರಂಭಿಸಿದೆ. ಜವಳಿ ಸಚಿವರಾದ ರುದ್ರಪ್ಪ ಲಮಾಣಿ ಇದರಿಂದ ಬಡವರಿಗೆ ಸೀರೆ ಪಂಚೆ ಕೊಡುವುದರಿಂದ ಅವರಿಗೂ ಅನುಕೂಲ ಆಗುತ್ತದರ ಜತೆಗೆ ನೇಕಾರರಿಗೂ ಉದ್ಯೋಗ ದೊರೆತಂತಾಗುತ್ತದೆ ಎನ್ನುತ್ತಾರೆ.