ಮಂಗಳೂರು, ನ 15(Daijiworld News/MB) : ಕಳೆದ 2013 ರ ಮಂಗಳೂರು ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ವಶದಲ್ಲಿದ್ದ 24 ಕ್ಷೇತ್ರಗಳು ಈಗ ಬಿಜೆಪಿಯ ವಶವಾಗಿದೆ.
ಕಳೆದ ಬಾರಿ ಬಿಜೆಪಿ ಪಾಲಾಗಿದ್ದ 20 ವಾರ್ಡ್ಗಳ ಪೈಕಿ ಬೆಂಗರೆ ವಾರ್ಡ್ನ್ನು ಹೊರತು ಪಡಿಸಿ ಉಳಿದೆಲ್ಲಾ ವಾರ್ಡ್ಗಳನ್ನು ತನ್ನ ಪಾಲಿಗೆ ಉಳಿಸಿಕೊಂಡ ಬಿಜೆಪಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದ 24 ವಾರ್ಡ್ಗಳಲ್ಲೂ ಜಯಗಳಿಸಿ ತನ್ನ ತೆಕ್ಕೆಗೆ ಪಡೆಯುವಲ್ಲಿ ಸಫಲವಾಗಿದೆ.
ಕಾಂಗ್ರೆಸ್ ತನ್ನ ವಶದಲ್ಲಿದ್ದ 24 ವಾರ್ಡ್ ಕಳೆದು ಕೊಂಡರೂ ಜೆಡಿಎಸ್ ನ 2ಕ್ಷೇತ್ರಗಳಾದ ವಾ.ನಂ.43 ಕುದ್ರೋಳಿ, ವಾ.ನಂ. 44 ಬಂದರ್ ಹಾಗೂ ಸಿಪಿಐಎಂ ನ ವಾ.ನಂ. 12 ಪಂಜಿಮೊಗರು ಕ್ಷೇತ್ರವನ್ನು ತನ್ನ ಗದ್ದುಗೆಗೆ ತೆಗೆದುಕೊಂಡಿದೆ.
2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ಕ್ಷೇತ್ರಗಳಾದ ವಾರ್ಡ್ನಂಬರ್ 3 ಕಾಟಿಪಳ್ಳ ಪೂರ್ವ, ವಾ.ನಂ. 7 ಇಡ್ಯಾ ಪಶ್ಚಿಮ, ವಾ.ನಂ. 8 ಹೊಸಬೆಟ್ಟು, ವಾ.ನಂ.10 ಬೈಕಂಪಾಡಿ, ವಾ.ನಂ. 13 ಕುಂಜತ್ತ್ ಬೈಲ್ ಉತ್ತರ, ವಾ.ನಂ. 14 ಮರಕಡ, ವಾ.ನಂ. 17 ದೇರೆಬೈಲ್ ಉತ್ತರ, ವಾ.ನಂ.18 ಕಾವೂರು, ವಾ.ನಂ. 19 ಪಚ್ಚನಾಡಿ, ವಾ.ನಂ. 21 ಪದವು ಪಶ್ಚಿಮ, ವಾ.ನಂ.22 ಕದ್ರಿ ಪದವು, ವಾ.ನಂ.25 ದೇರೆಬೈಲ್ ಪಶ್ಚಿಮ, ವಾ.ನಂ.26 ದೇರೆಬೈಲ್ ನೈರುತ್ಯ, ವಾ.ನಂ. 27 ಬೋಳೂರು, ವಾ.ನಂ. 30 ಕೊಡಿಯಾಲ್ ಬೈಲ್, ವಾ.ನಂ.33 ಕದ್ರಿ ಪಶ್ಷಿಮ, ವಾ.ನಂ. 34 ಶಿವಬಾಗ್, ವಾ.ನಂ. 35 ಪದವು ಸೆಂಟ್ರಲ್ , ವಾ.ನಂ.48 ಕಂಕನಾಡಿ ವೆಲೆನ್ಸಿಯಾ, ವಾ.ನಂ.51 ಅಳಪೆ ಉತ್ತರ , ವಾ.ನಂ. 55 ಅತ್ತಾವರ, ವಾ.ನಂ.57 ಹೊಯಿಗೆ ಬಜಾರ್, ವಾ.ನಂ.58 ಬೋಳಾರ, ವಾ.ನಂ.59 ಜಪ್ಪು ಈಗ ಬಿಜೆಪಿಯ ಪಾಲಾಗಿದೆ.
ಅಷ್ಟು ಮಾತ್ರವಲ್ಲದೆ 2013 ರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾದಿಸಿದ್ದ ವಾ.ನಂ.1 ಸುರತ್ಕಲ್ ಪಶ್ಚಿಮ ಈಗ ಬಿಜೆಪಿಗೆ ಸೇರಿದೆ. ಆದರೆ ಕಳೆದ ಬಾರಿ ಬಿಜೆಪಿ ವಶದಲ್ಲಿದ್ದ ಬೆಂಗರೆ ವಾರ್ಡ್ ಈಗ ಎಸ್ ಡಿ ಪಿ ಐ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಜೆಡಿಎಸ್ ಹಾಗೂ ಸಿಪಿಐಎಂ ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾದಿಸದೆ ಪಾಲಿಕೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ.