ವಿಟ್ಲ, ನ 05 (DaijiworldNews/SM): ಮಕ್ಕಳ ದಿನಾಚರಣೆ ದಿನವೇ 9ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಟ್ಲದ ಕೋಟಿಕೆರೆಯಲ್ಲಿ ನಡೆದಿದೆ.
ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ ಜುಬೈದಾ ಅವರ ಪುತ್ರ ಅಶ್ವದ್ ಆಹಮ್ಮದ್(15) ಮೃತಪಟ್ಟ ವಿದ್ಯಾರ್ಥಿ. ಈತ ವಿಟ್ಲದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದ. ಶಾಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಮಧ್ಯೆ ತನ್ನ ಸ್ನೇಹಿತನ ಜತೆ ವಿಟ್ಲದ ಇತಿಹಾಸ ಪ್ರಸಿದ್ಧ ಕೋಟಿಕೆರೆಗೆ ಈಜಾಲಲು ತೆರಳಿದ್ದಾನೆ.
ಅಲ್ಲಿ ಈಜಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಅಶ್ವದ್ ಅಹಮ್ಮದ್ ಮೃತಪಟ್ಟಿದ್ದಾನೆ. ಈ ಬಗ್ಗೆ ಗಮನಿಸಿದ ಸ್ಥಳೀಯ ಮನೆಯವರು ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಯುವಕ ಪ್ರತಾಪ್ ನೀರಿಗೆ ಹಾರಿ ಆತನನ್ನು ಮೇಲೆತ್ತಿದ್ದು, ಜೀವ ಉಳಿಸಲು ಸಾಧ್ಯವಾಗಿಲ್ಲ.