ಬಂಟ್ವಾಳ ಜ 11: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಹೂಳು ತುಂಬಿ ಅಯೋಗ್ಯವಾಗಿರುವ ಮೂರು ಕೆರಗಳನ್ನು ೨ ಕೋಟಿ ವೆಚ್ಚದಲ್ಲಿ ನಗರ ಯೋಜನಾ ಪ್ರಾಧಿಕಾರದ ಮೂಲಕ ಗುರುತಿಸಿ ಪುನಶ್ಚೇತನಗೊಳಿಸಲು ಕಾರ್ಯಪ್ರವೃತ್ತವಾಗಿದೆ. ಪುರಸಭಾ ವ್ಯಾಪ್ತಿಯ ಬಿ ಕಸ್ಬಾ ಗ್ರಾಮದ ಗಿರಿಗುಡ್ಡೆಯಲ್ಲಿ 2 ಎಕರೆ ಜಮೀನಿನಲ್ಲಿರುವ ಕೆರೆ, ಪಾಣೆಮಂಗಳೂರು ಗ್ರಾಮದ ಕೌಡೇಲುವಿನಲ್ಲಿ ೧೮ ಸೆಂಟ್ಸ್ ಮತ್ತು ಪಾಣೆಮಂಗಳೂರು ಗ್ರಾಮದ ನರಹರಿ ಸಮೀಪದ ನರಹರಿ ನಗರದಲ್ಲಿ ೪೦ಸೆಂಟ್ಸ್ ಜಾಗದಲ್ಲಿ ಪಾಳು ಬಿದ್ದ ಸ್ಥಿತಿಯಲ್ಲರುವ ಒಟ್ಟು ಮೂರು ಕೆರಗಳನ್ನು ಗುರುತಿಸಿ ಅಭಿವೃದಿಪಡಿಸುವ ನಿಟ್ಟಿನಲ್ಲಿ ಸರ್ವೆ ಕಾರ್ಯವನ್ನು ಮಾಡಲಾಗಿದೆ. ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರವರ ಮುತುವರ್ಜಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಕೆರೆ ಅಭಿವೃದ್ದಿ ನಿಧಿಯ ಮೂಲಕ ಸುಮಾರು ೨ ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಈ ಮೂರು ಕೆರಗಳ ಅಭಿವೃದ್ದಿಗಾಗಿ ಸ್ಥಳ ಪರಿಶೀಲನೆ ಮಾಡಿ ಅಂದಾಜು ಪಟ್ಟಿ ತಯಾರಿಸಲಾಗಿದೆ.
ಸದಾಶಿವ ಬಂಗೇರ: ಪುರಸಭಾವ್ಯಾಪ್ತಿಯಲ್ಲಿ ಒಟ್ಟು 14 ಕೆರೆಗಳು ಹೂಳು ತುಂಬಿದ ಸ್ಥಿತಿಯಲ್ಲಿದ್ದು , ಈಗಾಗಲೇ ನಗರ ಯೋಜನಾ ಪ್ರಾಧಿಕಾರ ಕೆರೆ ಉಳಿಸಿ ನೀರು ಸಂರಕ್ಷಿಸಿ ಎನ್ನುವ ಯೋಜನೆಯ ಕೈಗೊಂಡಿದ್ದು ಪ್ರಥಮ ಹಂತದಲ್ಲಿ ಸುಮಾರು ೨ ಕೋಟಿ ವೆಚ್ಚದಲ್ಲಿ ಪುರಸಭಾ ವ್ಯಾಪ್ತಿಯ ಮೂರು ಕೆರೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸ್ಥಳ ಪರಿಶೀಲನೆ ಮಾಡಲಾಗಿದ್ದು , ಅಂದಾಜು ಪಟ್ಟಿ ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಎಲ್ಲಾ ಕೆರಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದರು. ಪ್ರಾಣಿ, ಪಕ್ಷಿ ಮತ್ತು ಕೃಷಿಗೆ ಇದರಿಂದ ಹೆಚ್ಚು ಪ್ರಯೋಜನವಾಗುತ್ತದೆ ಎನ್ನುವ ಉದ್ದೇಶದಿಂದ ಕೆರೆಗಳನ್ನು ಉಳಿಸಿಬೇಕು ಎಂದರು. ಈ ಸಂದರ್ಭ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಸನ್ನ, ನಗರ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಷ್ ಎಮ್.ಪಿ,ವಲಯ ಕಾಂಗ್ರೇಸ್ ಅಧ್ಯಕ್ಷ ಅಹಮ್ಮದ್ ಬಾವ, ಯುವ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಸ್ಥಳಿಯರಾದ ಮಹೇಶ್ ಗಟ್ಟಿ, ಜಗದೀಶ್, ಮೋಹನ್ ಸಾಲ್ಯಾನ್, ಕಿಶನ್, ಗಣೇಶ್ , ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.