ಮಂಗಳೂರು, ನ 14 (Daijiworld News/MSP): 38ನೇ ಬೆಂದೂರ್ ವಾರ್ಡಿನಿಂದ ಸತತ 3 ಬಾರಿ ಕಾರ್ಪೋರೇಟರ್ ಆಗಿ ಮಹತ್ವದ ಜವಾಬ್ದಾರಿ ಹೊತ್ತುಕೊಂಡು ಬೆಂದೂರ್ ವಾರ್ಡ್'ನ್ನು ಮಾದರಿ ವಾರ್ಡ್'ನ್ನಾಗಿ ರೂಪಿಸಿದ ಅನುಭವಿ ರಾಜಕಾರಣಿ ನವೀನ್ ಆರ್ ಡಿಸೋಜಾ ನಾಲ್ಕನೇ ಬಾರಿಯೂ ಜಯಗಳಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಸಾಮಾನ್ಯರಲ್ಲಿ ಅತಿ ಸಾಮಾನ್ಯರಾಗಿ ಬೆರೆಯುವ ಸ್ವಭಾವ, ಹೊಸಹೊಸ ಯೋಜನೆಗಳನ್ನು ತಮ್ಮ ವಾರ್ಡ್'ಗೆ ತರುವಲ್ಲಿ ಯಶಸ್ವಿಯಾದ ಜನನಾಯಕ ನವೀನ್ ಆರ್ ಡಿಸೋಜಾ ಅವರಿಗೆ ಈ ಬಾರಿಯೂ ವಿಜಯಮಾಲೆ ಕೊರಳಿಗೆ ಬಿದ್ದಿದೆ.
ಮೂರು ಬಾರಿಯೂ ಕಾರ್ಪೋರೇಟರ್ ಆದಾಗ ವಾರ್ಡ್ ಸದಸ್ಯರ ಸಮಸ್ಯೆಗೆ ಸ್ಪಂದಿಸುತ್ತಾ ಪಾಲಿಕೆ ಹಾಗೂ ಸರಕಾರ ಒದಗಿಸಿದ ಅನುದಾನ, ಅವಕಾಶಗಳನ್ನು ತಮ್ಮ ವಾರ್ಡ್'ನಲ್ಲಿ ನವೀನ್ ಆರ್ ಡಿಸೋಜಾ ಸಮಪರ್ಕವಾಗಿ ಬಳಸಿಕೊಂಡಿದ್ದರು. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ನವೀನ್ ಆರ್ ಡಿಸೋಜಾ ಹೆಚ್ಚಿನ ಒತ್ತು ನೀಡಿದ್ದರು. ರಸ್ತೆ, ಕುಡಿಯುವ ನೀರು, ವಿದ್ಯುತ್, ಒಳಚರಂಡಿ, ಇತ್ಯಾದಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಇವರು ಶ್ರಮಿಸಿದ್ದರು.
ವಾರ್ಡ್ 38-ಬೆಂದೂರ್
1. ನವೀನ್ ಆರ್ ಡಿ’ಸೋಜ (ಕಾಂಗ್ರೆಸ್)-1598
2. ಜೇಸೆಲ್ ಡಿ’ಸೋಜ (ಬಿಜೆಪಿ)- 760
3. ಆಲ್ವಿನ್ ಪಿಂಟೋ