ಮಂಗಳೂರು, ನ 14 (Daijiworld News/MSP): ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ಗಳಿಗೆ ನವೆಂಬರ್ 12ರಂದು ನಡೆದ ಚುನಾಚಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಗೆ ನಗರದ ಸ್ಟೇಟ್ಬ್ಯಾಂಕ್ ಸಮೀಪದ ರೊಸಾರಿಯೋ ಶಾಲೆಯಲ್ಲಿ ಆರಂಭಗೊಂಡಿದೆ.51 ನೇ ಅಳಪೆ (ಉತ್ತರ) ವಾರ್ಡಿನಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀಮತಿ ರೂಪಶ್ರೀ ಪೂಜಾರಿ ಪ್ರಚಂಡ ಬಹುಮತದಿಂದ ಜಯಶಾಲಿಯಾಗಿದ್ದಾರೆ. ಅವರ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್ನ ಶ್ರೀಮತಿ ಶೋಭಾ.ಕೆ ಪರಭಾವಗೊಂಡಿದ್ದಾರೆ. ರೂಪ ಶ್ರೀ ಪೂಜಾರಿ 2073 ಮತಗಳನ್ನು ಗಳಿಸಿದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಶೋಭಾ 2007 ಮತಗಳನ್ನು ಗಳಿಸಿ ಪ್ರಬಲ ಸ್ಪರ್ಧೆ ಒಡ್ಡಿದ್ದರು.
ವಾರ್ಡ್ 51 ಅಳಪೆ (ಉತ್ತರ)
1. ರೂಪ ಶ್ರೀ ಪೂಜಾರಿ (ಬಿಜೆಪಿ) - 2073
2. ಶೋಭಾ (ಕಾಂಗ್ರೆಸ್) -2007