ಮಂಗಳೂರು, ನ 14 (Daijiworld News/MSP): ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ ಗಳಿಗೆ ಮಂಗಳವಾರ ನಡೆದ ಮತದಾನದ ಮತ ಎಣಿಕೆ ಕಾರ್ಯವು ಇಂದು ಮಂಗಳೂರಿನ ರೊಸಾರಿಯೋ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ.
20 ದಿನಗಳಿಂದ ನಡೆಯುತ್ತಿದ್ದ ಪಾಲಿಕೆ ಚುನಾವಣೆ ಪ್ರಕ್ರಿಯೆಗಳಿಗೆ ಇಂದು ತೆರೆ ಬೀಳಲಿದ್ದು ಪಾಲಿಕೆಯಲ್ಲಿ ಮುಂದಿನ ಅವಧಿಯ ಅಧಿಕಾರದ ಚುಕ್ಕಾಣಿ ಯಾವ ಪಕ್ಷದ ಪಾಲಿಗೆ ಒಲಿಯಬಹುದು ಎನ್ನುವುದು ಗೊತ್ತಾಗಲಿದೆ.
ಮತದಾರರ ತೀರ್ಪು ಕಣದಲ್ಲಿರುವ 180 ಅಭ್ಯರ್ಥಿಗಳ ಪೈಕಿ ಯಾರ ಪರವಾಗಿದೆ ಎಂಬ ಕುತೂಹಲಕ್ಕೆ ಇಂದು ಉತ್ತರ ದೊರೆಯಲಿದೆ.
ಪ್ರತಿ ಚುನಾವಣೆ ಅಧಿಕಾರಿ ಕೊಠಡಿಗೆ ಐದು ಟೇಬಲ್ ವ್ಯವಸ್ಥೆಮಾಡಲಾಗಿದ್ದು ಒಟ್ಟು 60 ಮೇಜುಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಎಣಿಕೆ ಮೇಲ್ವಿಚಾರಕ ಮತ್ತು ಒಬ್ಬ ಸಹಾಯಕ, ಓರ್ವ ಗ್ರೂಪ್ ಡಿ ನೌಕರನನ್ನು ನೇಮಿಸಲಾಗಿದೆ.