ಬಂಟ್ವಾಳ, ನ 13 (DaijiworldNews/SM): ರಾಷ್ಟ್ರೀಯ ಹೆದ್ದಾರಿ 75 ರ ಮಂಗಳೂರು-ಬೆಂಗಳೂರು ಮಧ್ಯೆ ಬಿಸಿರೋಡು ಬಸ್ ನಿಲ್ದಾಣದಲ್ಲಿ ರಸ್ತೆಯು ಹಾಳಾಗಿದ್ದು ಡಾಮರು ಎದ್ದು ಹೋಗಿ ನಿತ್ಯ ಧೂಳಿನ ಸಮಸ್ಯೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಧೂಳಿನ ಸಮಸ್ಯೆಯಿಂದ ಪಾರಾಗಲು ಬಿ.ಸಿ.ರೋಡಿನ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಏಜೆಂಟ್ ಗಳು ನೀರು ಹಾಯಿಸಿ ಇಲಾಖೆಯ ಗಮನ ಸೆಳೆಯುವ ಪ್ರಯತ್ನ ನಡೆಸಿದರು. ಕಳೆದ ಕೆಲ ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಂಬಂಧಿಸಿದ ರಸ್ತೆಯ ಡಾಮರು ಎದ್ದು ಹೋಗಿ ದೂಳಿನ ಸಮಸ್ಯೆಯಿಂದ ಪ್ರಯಾಣಿಕರು ಬಳಲುತ್ತಿದ್ದಾರೆ.
ಅದರೂ ಇಲಾಖೆ ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಬಸ್ ಗಾಗಿ ಕಾಯುವ ಪ್ರಯಾಣಿಕರಂತೂ ದೂಳಿನ ಸಮಸ್ಯೆಯಿಂದ ಹೈರಾಣಾಗಿದ್ದಾರೆ.
ಅಂಗಡಿ ಹೋಟೆಲ್ ಗಳು ಧೂಳಿನ ಸಮಸ್ಯೆಯಿಂದ ವ್ಯಾಪಾರ ವಹಿವಾಟು ಕಡಿಮೆ ಅಗಿದೆ ಎಂದು ಹೇಳುತ್ತಿದ್ದಾರೆ.
ಇನ್ನೊಂದು ಕಡೆಯಿಂದ ವಿಪರೀತ ಧೂಳಿನಿಂದಾಗಿ ಸೊಂಕು ರೋಗ ಬರುತ್ತದೋ ಎಂಬ ಹೆದರಿಕೆಯಲ್ಲಿ ಇಲ್ಲಿನ ನಿವಾಸಿಗಳು ಸಂಬಂಧಿಸಿದ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಂತೂ ಹೆದ್ದಾರಿಯವರನ್ನು ಯಾರು ಹೇಳುವವರು ಕೇಳುವವರು ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುವ ಮಟ್ಟಕ್ಕೆ ಇವರ ಕಾರ್ಯವೈಖರಿ ಇದೆ.
ಸಾರ್ವಜನಿಕರು ಧೂಳಿನ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಹೆದ್ದಾರಿ ಇಲಾಖೆ ಬಿಸಿರೋಡಿನ ಹೃದಯಭಾಗದಲ್ಲಿಯಾದರೂ ರಸ್ತೆಗೆ ಡಾಮರೀಕರಣ ಮಾಡಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹ.