ಉಡುಪಿ, ನ 12 (Daijiworld News/ MB) : ಉಡುಪಿ ನಗರ ಠಾಣಾ ಎಸ್.ಐ ಅನಂತ ಪದ್ಮನಾಭ ಅವರನ್ನು ಉಡುಪಿಯ ಭುಜಂಗ ಪಾರ್ಕ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನವೆಂಬರ್ 11 ರಿಂದ ಅಮಾನತು ಮಾಡಲಾಗಿದೆ.
ಉಡುಪಿಯ ಭುಜಂಗ ಪಾರ್ಕ್ ನಲ್ಲಿ ಒಂದು ಹುಡುಗಿ ಹಾಗೂ ಮೂವರು ಹುಡುಗರು ಕುಳಿತು ಮಾತಾತ್ತಿದ್ದಾಗ ಅಲ್ಲಿಗೆ ಬಂದ ಕೆಲವರು ಗುರುತು ಚೀಟಿ ತೋರಿಸುವಂತೆ ಹೇಳಿ ನೈತಿಕ ಪೊಲೀಸ್ ಗಿರಿ ನಡೆಸಿದ್ದರು ಎಂಬ ಆರೋಪಿಸಲಾಗಿತ್ತು. ಆದರೆ ಈ ಘಟನೆಯ ಕುರಿತ ಮಾಹಿತಿಯನ್ನು ಉಡುಪಿ ನಗರ ಠಾಣಾ ಎಸ್.ಐ ಅನಂತ ಪದ್ಮನಾಭರವರು ಎಸ್.ಪಿ ನಿಷಾ ಜೇಮ್ಸ್ ಗೆ ನೀಡಿಲ್ಲವೆಂಬ ಕಾರಣದ ಮೇರೆಗೆ ಅವರನ್ನು ಅಮಾನತು ಮಾಡಲಾಗಿದೆ.
ಮಹಿಳಾ ಠಾಣೆಯ ಎಸ್ಐ ಫೆಮಿನಾ ಅವರು ಉಡುಪಿ ನಗರ ಠಾಣಾ ಪ್ರಭಾರಿ ಎಸ್.ಐ ಯಾಗಿ ಅಧಿಕಾರ ವಹಿಸಿದ್ದಾರೆ.
ಈ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.