ಮಂಗಳೂರು, ನ 12 (Daijiworld News/ MB) : ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಮಂದಗತಿಯಲ್ಲಿ ಸಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತದಾನ ಆರಂಭವಾಗುತಿದಂತೆ ಮತದಾರರು ಸರತಿ ಸಾಲಲ್ಲಿ ನಿಂತು ಮತ ಚಲಾಯಿಸ ತೊಡಗಿದ್ದಾರೆ.
ಚುನಾವಣೆ ನಡೆಯುತ್ತಿರುವ 60 ವಾರ್ಡ್ಗಳಲ್ಲಿ ಬೆಳಿಗ್ಗೆ 9 ಗಂಟೆಗೆ 10.75 ಶೇಕಡ ಮತದಾನ ನಡೆದಿದೆ.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ವಿಧಾನ ಸಭಾ ಪರಿಷತ್ ಸದಸ್ಯ ಐವನ್ ಡಿ ಸೋಜಾ ಮತಚಲಾಯಿಸಿದ್ದಾರೆ.
ಈ 60 ವಾರ್ಡ್ಗಳಲ್ಲಿ ಒಟ್ಟು 180 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದು, ಅವರಲ್ಲಿ 27 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ. ಒಟ್ಟು 3,87,517 ಮತದಾರದ ಪೈಕಿ 1,87,465 ಮಹಿಳೆಯರು, 1,99,989 ಪುರುಷರು ಮತ್ತು 63 ಜನ ಇತರರು ಮತದಾನ ಮಾಡಿ ಮುಂದಿನ ಆಡಳಿತವನ್ನು ಆಯ್ಕೆ ಮಾಡಲಿದ್ದಾರೆ.