ಮಂಗಳೂರು, ಸೆ15: ಬೇರೆ ಬೇರೆ ಚಿತ್ರರಗಂಗ್ಕೆ ಹೋಲಿಸಿದಾಗ ಕೋಸ್ಟಲ್ವುಡ್ ಕೂಡ ಯಾರಿಗೂ ಕಮ್ಮಿ ಇಲ್ಲ ಅನ್ನುವಂತೆ ವೇಗವಾಗಿ ಬೆಳೆಯುತ್ತಿದೆ. ಇದ್ಕಕೆ ಸಾಕ್ಷಿ ಈಗಾಗಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಪತ್ತನಾಜೆ ಸಿನಿಮಾ. ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಕಲಾರಸಿಕರ ಮನಸೂರೆಗೊಳಿಸಿದೆ. ಚಿತ್ರದ ಕಥೆ ಅದ್ಭುತವಾಗಿ ಮೂಡಿಬಂದಿದ್ದು ಪ್ರೇಕ್ಷಕರಿಂದ ಭಿನ್ನ ರೀತಿಯ ಸಿನಿಮಾ ಅನ್ನೋ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಕಲಾಜಗತ್ತು ಕ್ರೀಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿದ್ದ ಪತ್ತನಾಜೆ ಚಿತ್ರದಲ್ಲಿ ಹಾಡುಗಳು ವಿಭಿನ್ನವಾಗಿದ್ದು, ಚಿತ್ರದಲ್ಲಿರುವ ಎಲ್ಲಾ ಹಾಡುಗಳು ಸುಂದರವಾಗಿ ಮೂಡಿಬಂದಿದೆ. ಯಕ್ಷರಂಗದಲ್ಲಿ ಸಂಚಲನ ಮೂಡಿಸಿರುವ ಪಟ್ಲ ಸತೀಶ್ ಶೆಟ್ಟಿಯವರ ಹಾಡುಗಳು ಚಿತ್ರದಲ್ಲಿದ್ದು, ಅವರೇ ಅಭಿನಯಿಸಿ ಕಲಾಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಡಾ. ಸುನೀತ ಶೆಟ್ಟಿ, ಭಾಸ್ಕರ್ ರೈ ಕುಕ್ಕುವಳ್ಳಿ, ನವನೀತ್ ಶೆಟ್ಟಿ ಕದ್ರಿ, ಡಾ. ದಿನಕರ್ ಪಚ್ಚನಾಡಿಯವರು ಬರೆದಿರುವ ಗೀತೆಗಳಿಗೆ ವಿ. ಮನೋಹರ್ ಧ್ವನಿಗೂಡಿಸಿದ್ದು ಎಲ್ಲಾ ಹಾಡುಗಳು ಪ್ರೇಕ್ಷಕರ ಮನರಂಜಿಸಿದೆ.
ಪತ್ತನಾಜೆ ಚಿತ್ರದ ಕಥೆ ರೋಮಾಂಚನಕಾರಿಯಾಗಿದ್ದರೂ ಹದಿ ಹರೆಯದ ಮನಸ್ಸುಗಳಿಗೆ ಮುದ ನಿಡಿದೆ. ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಅವರ ಸಂಭಾಷಣೆಯಿಂದ ಚಿತ್ರಕ್ಕೆ ಮತ್ತಷ್ಟೂ ಪುಷ್ಠಿ ದೊರೆತಿದ್ದು, ಕರಾವಳಿಯ ಸಂಸ್ಕ್ರತಿ-ಸಂಪ್ರದಾಯವನ್ನು ಚಿತ್ರ ಎತ್ತಿ ಹಿಡಿದಿರುವುದರಿಂದ ಚಿತ್ರ ಸಿನಿ ಪ್ರೇಕ್ಷಕರ ಮನ ಗೆದ್ದಿದೆ.
ಕರಾವಳಿಯ ವಿಶೇಷ ಹಬ್ಬವಾದ ಪತ್ತನಾಜೆ ಅನ್ನೋ ಹೆಸರಿನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಿರ್ದೇಶಕರು ಕೌಟುಂಬಿಕ ವಿಷಯವನ್ನು ಸುಂದರವಾಗಿ ಹೆಣೆದಿದ್ದಾರೆ. ಒಂದೆಡೆ ಯುವ ಮನಸ್ಸುಗಳ ಪ್ರೀತಿ ಪ್ರೇಮವನ್ನು ಚಿತ್ರ ತೋರಿಸಿದ್ರೆ, ಮತ್ತೊಂದೆಡೆ ಸಮಾಜದ ತಾರತಮ್ಯಗಳ ಆಯಾಮಗಳಿಗೆ ಸಿಲುಕಿ ಕೊನೆಗೆ ಈ ಮಣ್ಣಿನ ಸಂಸ್ಕ್ರತಿಯ ಶಕ್ತಿಯಿಂದ, ಸಮಸ್ಯೆಯಿಂದ ಪಾರಾಗುವುದನ್ನು ಚಿತ್ರ ಎಳೆ ಎಳೆಯಾಗಿ ತೋರಿಸಿಕೊಟ್ಟಿದೆ.
ಉತ್ತಮ ಮತ್ತು ವಿಭಿನ್ನ ಕಥಾವಸ್ತುವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಸ್ಯಾಂಡಲ್ವುಡ್ನಲ್ಲಿ ಮಿಂಚು ಹರಿಸಿರುವ ಶಿವಧ್ವಜ್, ನಟ ಸೂರ್ಯರಾವ್, ಪ್ರತಿಭಾನ್ವಿತ ಕಲಾವಿದೆ ರೇಷ್ಮಾ ಶೆಟ್ಟಿ, ಜೊತೆಗೆ ಕಲಾವಿದ ಪ್ರತೀಕ್ ಅವರ ನಟನೆ ಅದ್ಭುತವಾಗಿ ಮೂಡಿಬಂದಿದ್ದು, ಪ್ರೇಕ್ಷಕರಿಗೆ ಖುಷಿಕೊಟ್ಟಿದೆ.
ಉಳಿದಂತೆ ಚೇತನ್ ರೈ ಮಾಣಿ, ಸುಂದರ್ ರೈ ಮಂದಾರ, ಪ್ರವೀಣ್ ಮರ್ಕಮೆ, ಸೀತಾ ಕೋಟೆ, ರವಿ ಸುರತ್ಕಲ್, ಸುರೇಂದ್ರ ಕುಮಾರ್ ಹೆಗ್ಡೆ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ರಮೇಶ್ ರೈ ಕುಕ್ಕುವಳ್ಳಿ, ಮಂಗೇಶ್ ಭಟ್ ಹೀಗೆ ಸಾಲು ಸಾಲು ಕಲಾವಿದ ದಿಗ್ಗಜರು ಚಿತ್ರದಲ್ಲಿ ನಟಿಸಿ ಛಾಪು ಮೂಡಿಸಿದ್ದಾರೆ.
ಕೋಸ್ಟಲ್ವುಡ್ ಅಂಗಳದಲ್ಲಿ ತೆರೆ ಕಂಡಿರುವ ಚಿತ್ರಗಳಿಗೆ ಪತ್ತನಾಜೆ ಚಿತ್ರವು ಪೈಪೋಟಿ ಕೊಟ್ಟಿದ್ದು ಶುದ್ಧ ಮನರಂಜನೆಯ ಚಿತ್ರ. ತುಳುನಾಡಿನ ಸಂಸ್ಕ್ರತಿ, ಸಂಪ್ರದಾಯ, ಜನ-ಜೀವನ, ನಂಬಿಕೆ ನಡಾವಳಿಯನ್ನು ಆಧರಿಸಿ ನಿರ್ಮಾಣವಾಗಿರುವ ಚಿತ್ರಕ್ಕೆ ಕರಾವಳಿಯ ಎಲ್ಲೆಡೆ ಉತ್ತಮ ಅಭಿಪ್ರಾಯಗಳು ಕೇಳಿ ಬಂದಿದೆ.