ಮಂಗಳೂರು, ನ 10 (DaijiworldNews/SM): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರ ಇಂದು ಅಂತ್ಯಗೊಂಡಿದೆ. ಕೊನೆಯ ದಿನವಾದ ರವಿವಾರದಂದು ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದರು. ನಗರದ 36ನೇ ಪದವು ವಾರ್ಡಿನ ಅಭ್ಯರ್ಥಿ ಭಾಸ್ಕರ ಮೊಯ್ಲಿಯವರೂ ಕೂಡ ಇಂದು ಭರ್ಜರಿ ಪ್ರಚಾರ ನಡೆಸಿದರು.
ಕೊನೆಯ ಕ್ಷಣದಲ್ಲಿ ಮತದಾರ ಮನೆ ಮನೆಗಳಿಗೆ ತೆರಳಿ ಭರ್ಜರಿ ಪ್ರಚಾರ ನಡೆಸಿದರು. ಪಚ್ಚನಾಡಿ ವಾರ್ಡಿನ ಪ್ರತೀ ಮನೆ ಮನೆಗೂ ಭೇಟಿ ನೀಡಿ ತಮ್ಮ ಪರ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ಇನ್ನು ಇವರು ಈ ಹಿಂದೆ ಮೂರು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದಾರೆ. ಇದು ಅವರ ನಾಲ್ಕನೇ ಸ್ಪರ್ಧೆಯಾಗಿದೆ. ಇನ್ನು ಕಳೆದ ಅವಧಿಯಲ್ಲಿ ಮೇಯರ್ ಆಗಿ ಕೂಡ ಮಂಗಳೂರು ಮಹಾನಗರದ ಜನತೆಗೆ ತಮ್ಮ ಅಮೂಲ್ಯವಾದ ಸೇವೆಯನ್ನು ನೀಡಿದ್ದರು.
ಕಡಿಮೆ ಮಾತು ಹೆಚ್ಚಿನ ಕೆಲಸ ಎಂಬಂತಿದ್ದ ಭಾಸ್ಕರ್ ಸದಾ ಅಭಿವೃದ್ಧಿಯತ್ತ ಒಲವನ್ನು ತೋರುತ್ತಿದ್ದರು. ಇನ್ನು ಕಳೆದ ಅವರ್ಧಿಯಲ್ಲಿ ಪಾಲಿಕೆಯ 60 ವಾರ್ಡ್ ಗಳ ಪೈಕಿ ಅತ್ಯಧಿಕ ಮತಗಳಿಸಿ ವಿಜಯಿಯಾದವರೆಂದರೆ ಅದು ಭಾಸ್ಕರ ಮೋಯ್ಲಿ.
ಇದೀಗ ನಾಲ್ಕನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮಂಗಳೂರಿನ ತನ್ನ ವಾರ್ಡ್ ನ ಜನತೆ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಲಿದ್ದಾರೆ. ಹಾಗೂ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ ಎಂಬುವುದು ಅವರ ವಿಶ್ವಾಸದ ಮಾತಾಗಿದೆ.