ಉಡುಪಿ,ನ 10 (Daijiworld News/MB) :ಉಳ್ತೂರು ಹೊಯ್ಗೆ ಸಾಲು ಪ್ರತಾಪ್ ಶೆಟ್ಟಿಯವರಿಗೆ ಸೇರಿದ ದನವೊಂದನ್ನು ಮಧ್ಯರಾತ್ರಿ ಕೊಟ್ಟಿಗೆಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ನಗರದ ಕುಂದಾಪುರ ತಾಲೂಕಿನ ಉಳ್ತೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಈ ಪ್ರಕರಣದಲ್ಲಿ ಮನೆಯವರು ದಳ್ಳಾಳಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ದಲ್ಲಾಳ್ಳಿಯೊಬ್ಬ ಈ ಹಿಂದೆ ದನವನ್ನು ಸಾಕಲು ಕೇಳಲು ಬಂದಾಗ ನಿರಾಕರಿಸಿದ್ದೆವು. ಆದಾದ ನಂತರ ಕೆಲವು ದಿನ ಕಳೆದು ಮತ್ತೊಬ್ಬ ವ್ಯಕ್ತಿ ಬಂದು ದನ ಕೇಳಿದ್ದಾನೆ. ಆಗಲೂ ದನ ನೀಡಲು ನಿರಾಕರಿಸಿದ್ದೆವು. ಅದರ ಮಾರನೇ ದಿನವೇ ಕೊಟ್ಟಿಗೆಯಲ್ಲಿದ್ದ ದನವೊಂದು ಕಾಣೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಕೋಟ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆತನ ವಿರುದ್ಧ 2 ವರ್ಷಗಳ ಹಿಂದೆ ಕೂಡ ಇದೇ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
20ಕ್ಕೂ ಹೆಚ್ಚು ಗೋವುಗಳ ಮತ್ತು ದೇವಾಲಯ ಸಮೀಪ ಮಲಗುವ ಬಸವಗಳ ಕಳ್ಳತನ ಸುಮಾರು 3 ತಿಂಗಳಲ್ಲಿ ನಡೆದಿದ್ದು, ಅಕ್ರಮ ಗೋ ಸಾಗಾಟ ಹಾಗೂ ಗೋ ಕಳ್ಳತನ ಈ ಪರಿಸರದಲ್ಲಿ ಹೆಚ್ಚಾಗಿ ಸಂಭವಿಸುತ್ತಿದ್ದು ಪೊಲೀಸರು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜಜನಿಕರು ಆಗ್ರಹಿಸಿದ್ದಾರೆ.