ಮಂಗಳೂರು, ನ.08(Daijiworld News/SS): ಕಳ್ಳತನದ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ವಿಚಾರಣಾಧಿನ ಕೈದಿಯೊಬ್ಬ ಜಿಲ್ಲಾ ಕಾರಾಗೃಹ ಆವರಣದಿಂದ ಪರಾರಿಯಾದ ಘಟನೆ ನಡೆದಿದೆ.
ಮಹಮ್ಮದ್ ರಫೀಕ್ ಪರಾರಿಯಾದ ಕೈದಿ. ಈತ ಕೈದಿ ಬೆಂಗಾವಲು ಸಮಯ ಮಂಗಳೂರು ಜೈಲು ಸಮೀಪ ತಪ್ಪಿಸಿಕೊಂಡು ಪರಾರಿಯಾಗಿರುತ್ತಾನೆ ಎಂದು ತಿಳಿದು ಬಂದಿರುತ್ತದೆ.
ಪೊಲೀಸರನ್ನು ದೂಡಿ ಹಾಕಿ ಮೊದಲೇ ಬಂದು ನಿಂತಿದ್ದ ಆತನ ಗೆಳೆಯನೊಂದಿಗೆ ಬೈಕ್'ನಲ್ಲಿ ಪರಾರಿಯಾಗಿರುತ್ತಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈತನ ಮಾಹಿತಿ ಸಿಕ್ಕಲ್ಲಿ ದ.ಕ ಜಿಲ್ಲಾ ಕಂಟ್ರೋಲ್ ರೂಮ್'ಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.