ಮಂಗಳೂರು,ನ 8 (Daijiworld News/MSP): ದಿನಕಳೆಯುತ್ತಿದ್ದಂತೆ ಮಹಾನಗರ ಪಾಲಿಕೆ ಚುನಾವಣೆ ಕಣ ರಂಗೇರುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸುತ್ತಿರುವ 180 ಅಭ್ಯರ್ಥಿಗಳ ಪೈಕಿ 82 ಮಂದಿ ಮಹಿಳೆಯರು. ಇವುಗಳಲ್ಲಿ 60 ವಾರ್ಡ್ ಗಳಲ್ಲಿ 29 ವಾರ್ಡ್ ಗಳು ಮಹಿಳಾ ಮೀಸಲು ಹೊಂದಿದೆ. ಮಹಿಳಾ ಮೀಸಲು ಕ್ಷೇತ್ರವಾದ 9ನೇ ಕುಳಾಯಿ ವಾರ್ಡ್ ನಿಂದ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗಿಳಿದವರು, ಶ್ರೀಮತಿ ಗಾಯತ್ರಿ ವಿಜಯ್.
ಕಾಂಗ್ರೆಸ್ ಪಕ್ಷ ಇವರ ಸಮಾಜಮುಖಿ ಕೆಲಸವನ್ನು ಗುರುತಿಸಿ ಕುಳಾಯಿ ಕ್ಷೇತ್ರದಿಂದ ಟಿಕೆಟ್ ನೀಡಿದ್ದು, ಅಭಿವೃದ್ದಿ ಎನ್ನುವ ಧ್ಯೇಯದೊಂದಿಗೆ ಇವರು ಮತಭೇಟೆಗಿಳಿದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಗಾಯತ್ರಿ ವಿಜಯ್ ಪ್ರಸ್ತುತ ಸುರತ್ಕಲ್ ವಾರ್ಡ್ ನಲ್ಲಿ ಟೂರ್ ಆಂಡ್ ಟ್ರಾವೆಲ್ಸ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಮತ್ತಷ್ಟು ಸಮಾಜಸೇವೆ ಮಾಡಬೇಕು ಎನ್ನುವ ಆಶಯದೊಂದಿಗೆ ಚುನಾವಣೆಗೆ ಧುಮುಕಿರುವ ಗಾಯತ್ರಿ ವಿಜಯ್ ಅವರಿಗೆ ಕುಳಾಯಿ ವಾರ್ಡಿನ ಸರ್ವತೋಮುಖ ಅಭಿವೃದ್ದಿಗೆ ದುಡಿಯುವ ಮಹದಾಸೆಯಿದೆ.
ನಗರಾಭಿವೃದ್ಧಿಯ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಆಧ್ಯತೆ, ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸೌಕರ್ಯಗಳು, ಹಿರಿಯ ನಾಗರಿಕರಿಗೆ ಒದಗುವ ಸವಲತ್ತುಗಳು ಮುಂತಾದ ಕನಸಿನ ಯೋಜನೆ ಸಿದ್ದವಾಗಿದೆ. ಇಷ್ಟು ಮಾತ್ರವಲ್ಲದೆ ಸಮಾಜದ ಎಲ್ಲಾ ವರ್ಗಗಳ ಜನರ ಸೇವೆಗೆ ಬದ್ದಳಾಗಿ ದುಡಿಯುತ್ತೇನೆ ಎನ್ನುವ ಹಸನ್ಮುಖಿ , ಸಮಾಜಸೇವಕಿ ಗಾಯತ್ರಿ ವಿಜಯ್ ಅವರಿಗೆ ಮತದಾರರ ಒಲವು ಬೇಕಾಗಿದೆ.