ಮಂಗಳೂರು, ನ 8 (Daijiworld News/MSP): ಭಾರತೀಯ ಕಥೊಲಿಕ್ ಯುವ ಸಂಚಲನ(ಐಸಿವೈಎಂ )ದ ಮಾಜಿ ಕೇಂದ್ರ ಸಮಿತಿ ಸದಸ್ಯ ಆಲ್ವಿನ್ ಫ್ರಾನ್ಸಿಸ್ ಫರ್ನಾಂಡಿಸ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ನವೆಂಬರ್ 8 ಶುಕ್ರವಾರ ಬೆಳಕಿಗೆ ಬಂದಿದೆ. ಇವರು ಪೆರ್ಮಾನೂರು ಚರ್ಚ್ನ ಸೇಂಟ್ ಸೆಬಾಸ್ಟಿಯನ್ ಎರಡನೇ ವಾರ್ಡ್ ಉಳ್ಳಾಲ ಉಲಿಯಾ ನಿವಾಸಿಯಾಗಿದ್ದರು.
ಆಲ್ವಿನ್ ಅವರು ಮಂಗಳೂರು ದಕ್ಷಿಣ ವಲಯದ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ನ.8 ರ ಪೆರ್ಮನ್ನೂರು ಚರ್ಚ್ ನಲ್ಲಿ 3 ಗಂಟೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.