ಬಂಟ್ವಾಳ, ನ 06 (DaijiworldNews/SM): ಬಂಟ್ವಾಳ ಎಸ್ಜಿಎಸ್ವೈ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಪಡಿತರಚೀಟಿ ಗೊಂದಲ, ಅನರ್ಹ ಪಡಿತರದಾರರಿಗೆ ದಂಡ ವಸೂಲಾತಿ ಕ್ರಮದ ಬಗ್ಗೆ ಚರ್ಚೆ ನಡೆಯಿತು.
ಶಾಸಕ ಯು.ಟಿ. ಖಾದರ್ ಪ್ರಸ್ತಾಪಿಸಿ, ಪಡಿತರಚೀಟಿಯ ಬಗ್ಗೆ ಜನರು ಗೊಂದಲಕ್ಕೀಡಾಗಿದ್ದಾರೆ. ಸಾಮಾನ್ಯ ಜನರಿಗೆ ತೊಂದರೆ ನೀಡುವಂತಹ ನಿರ್ಣಯ ಜಾರಿಗೊಳಿಸುವುದು ಸರಿಯಲ್ಲ. ಉಚಿತ ಅನ್ನಕ್ಕೆ ದಂಡ ವಸೂಲಿ ಮಾಡುತ್ತಿರುವ ಪ್ರಕ್ರಿಯೆ ಇದೇ ಮೊದಲು ಎಂದರು.
ಕಳೆದ ಎರಡು ವರ್ಷದ ಹಿಂದೆ ಸೈಬರ್ ಸಮೇತ ಇನ್ನೀತರ ಕಡೆಗಳಲ್ಲಿ ಮನೆನಂಬ್ರ ಇಲ್ಲದವರು ಮನೆಗೆ ಎರಡರಂತೆ ಪಡಿತರ ಚೀಟಿ ಹೊಂದಿದ್ದಾರೆ. ಅದರಂತೆ ಬೊಗಸ್ ಅಡುಗೆ ಅನಿಲ ಸಂಪರ್ಕ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಚಕ್ರದ ಖಾಸಗಿ ವಾಹನ ಹೊಂದಿರುವ ಬಿಪಿಎಲ್ ಪಡಿತರ ಕಾರ್ಡ್ ಇದೆ. ಅಲ್ಲದೆ ಮನೆ ನಂಬರ್ ಇಲ್ಲದ ಬಿಪಿಎಲ್ ಕಾರ್ಡ್ ರದ್ದು ಮಾಡುವಂತೆ ಸದಸ್ಯ ಪ್ರಭಾಕರ ಪ್ರಭು ಒತ್ತಾಯಿಸಿದರು.
ತಾಲೂಕು ಪಂಚಾಯತ್ ಸ್ವಾದೀನದಲ್ಲಿರುವ ಸರಕಾರಿ ಜಮೀನಿನಲ್ಲಿ ಸ್ವಲ್ಪ ಜಾಗ ಒಬ್ಬರು ಅತಿಕ್ರಮಣ ಮಾಡಿರುತ್ತಾರೆ. ಒಟ್ಟಾರೆಯಾಗಿ 0.30 ಸೆಂಟ್ಸ್ ಜಮೀನು ಸರಕಾರಿ ಅಧಿಕಾರಿಗಳ ವಸತಿಗೃಹಗಳ ನಿರ್ಮಾಣಕ್ಕೆ ಕಾಯ್ದಿರಿಸಿದನ್ನು ಬಿಟ್ಟರೆ ತಾಲೂಕು ಪಂಚಾಯತ್ ಕಚೇರಿ ಸೇರಿದಂತೆ ಸ್ತ್ರೀಶಕ್ತಿ ಭವನ, ಸಾಮಾರ್ಥ್ಯ ಸೌಧ, ಆಶ್ರಮ ಶಾಲೆ, ವಾಹನ ಶೆಡ್ಗಳೆಗೆ ಜಮೀನು ಮಂಜೂರುಗೊಂಡಿಲ್ಲ ಎಂದರು.