ಮಡಿಕೇರಿ, ನ 03 (Daijiworld/MB): ಪತ್ನಿಗೆ 30 ಬಾರಿ ಚಾಕುವಿನಿಂದ ಇರಿದು ಅಮಾನುಷವಾಗಿ ಹತ್ಯೆ ಮಾಡಿದ ಮಡಿಕೇರಿಯ ಹೊಸಬಡಾವಣೆಯಲ್ಲಿ ನಡೆದಿದೆ.
ಹತ್ಯೆಯಾದ ಜುಬೈದಾ(25)ರನ್ನು ಪತಿ ಷರೀಫ್ 7 ವರ್ಷದ ಹಿಂದೆ ಮದುವೆಯಾಗಿದ್ದು, ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಇರಿದಿದ್ದಾರೆ.
ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಶನಿವಾರ ರಾತ್ರಿ ಪತಿ ಪತ್ನಿಯ ನಡುವೆ ನಡೆದ ಜಗಳದಲ್ಲಿ ಪತಿ ಷರೀಪ್ ಕೋಪಗೊಂಡು ಪತ್ನಿಗೆ 30 ಬಾರಿ ಚಾಕುವಿನಿಂದ ಇರಿದಿದ್ದು ಆಕೆ ಸಾವನ್ನಪ್ಪಿದ್ದಾಳೆ.
ಷರೀಪ್ ನನ್ನು ಪೊಲೀಸರು ಬಂಧಿಸಿದ್ದು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.