ಉಡುಪಿ , ನ 03 (Daijiworld/MB ) : 'ಇಲ್ಲಿನ ಶಿರ್ವ ಡಾನ್ ಬಾಸ್ಕೋ ಶಾಲೆಯ ಮುಖ್ಯೋಪಾದ್ಯಾಯರ ಕೊಠಡಿಯಲ್ಲಿ ಪ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಪಾಧರ್ ಮಹೇಶ್ ಡಿ`ಸೋಜ (36) ರು ಯಾವುದೋ ಜಿಗುಪ್ಸೆಯಿಂದ ಬಳಲುತ್ತಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ'ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
'ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಅಥವಾ ಯಾವುದೇ ಅಪರಾಧಿಕ ಕೃತ್ಯ ನಡೆದಿರುವ ಸುಳಿವು ದೊರೆತಿಲ್ಲ. ದೇಹದ ಪ್ರಮುಖ ಅಂಗಾಗಗಳ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಲಯಕ್ಕೆ ಕಳಿಸಲಾಗಿದ್ದು, ತನಿಖೆ ಮುಕ್ತಾಯಗೊಂಡ ನಂತರ ಅಂತಿಮ ವರದಿ ನೀಡಲಾಗುವುದು’ ಎಂದು ಹೇಳಿದ್ದಾರೆ.
ಫಾ.ಮಹೇಶ್ ಅವರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳ ಕುರಿತು ಮಾತಾನಾಡಿದ ಅವರು, 'ಸುಳ್ಳು ಮಾಹಿತಿ ಮತ್ತು ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಅನುಮತಿ ಇಲ್ಲದೆ ಗುಂಪು ಸೇರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.