ಮಂಗಳೂರು ಜ 08 : ಕೋಮು ಸಂಘರ್ಷಕ್ಕೆ ದೀಪಕ್ ರಾವ್ ಹತ್ಯೆಯಾಗಿಲ್ಲ, ಮೇಲ್ನೋಟಕ್ಕೆ ಇದೊಂದು ಸುಪಾರಿ ಹತ್ಯೆಯಂತೆ ಕಂಡು ಬರುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ, ಕಾಂಗ್ರೆಸ್ ಕಚೇರಿಯಲ್ಲಿ ಜ 08 ರ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಹತ್ಯೆಗೆ ಹತ್ಯೆ ಉತ್ತರವಲ್ಲ, ಪ್ರೀತಿ ವಿಶ್ವಾಸ ಎಲ್ಲರಲ್ಲೂ ಇರಬೇಕು ನಾನು ಕರಾವಳಿಯಲ್ಲಿ ನಡೆದ ಈ ಎರಡು ಹತ್ಯೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಕಾಟಿಪಳ್ಳದಲ್ಲಿ ಹತ್ಯೆಯಾದ ದೀಪಕ್ ತಾಯಿಯೇ ದೀಪಕ್ ರಾವ್ ಯಾವ ಸಂಘಟನೆಗೂ ಸೇರಿದವನಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಹಿಂದೂ ಕಾರ್ಯಕರ್ತ ಎಂದು ಬಿಂಬಿಸುತ್ತಿದೆ ಎಂದರು. ಹತ್ಯೆ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯುವುದು ಎಷ್ಟು ಸರಿ ? ಕೆಲವೊಂದು ಪ್ರಚೋದನಕಾರಿ ಹೇಳಿಕೆಗಳಿಂದ ಕೋಮುಗಲಭೆ ಸೃಷ್ಟಿಯಾಗುತ್ತಿದ್ದು ಎಷ್ಟೋ ಅಮಾಯಕ ಜೀವಗಳು ಬಲಿಯಾಗುತ್ತವೆ. ಇನ್ನೂ ಬೇರೆ ವಿಚಾರಗಳಿಗೂ ಹತ್ಯೆಯಾದರೂ ಅದಕ್ಕೆ ಕೋಮುವಾದದ ಬಣ್ಣಬಳಿಯಲಾಗುವುದು ದುರಾದೃಷ್ಟಕರ ಎಂದು ಹೇಳಿದರು. ಇದೇ ವೇಳೆ ಬಶೀರ್ ಹತ್ಯೆಯಾದಾಗ ಅವರ ಸಹೋದರ ಹಕೀಂ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದನ್ನು ಶ್ಲಾಘಿಸಿದರು.