ಮಂಗಳೂರು, ಅ 31 (DaijiworldNews/SM): ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ಗಳಿಗೆ ನವೆಂಬರ್ 12ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಗುರುವಾರದಂದು ಅಂತ್ಯಗೊಂಡಿದೆ. ಕೊನೆಯ ದಿನವೇ ಹಲವಾರು ನಾಮಪತ್ರಗಳು ಸಲ್ಲಿಕೆಯಾಗಿವೆ. ಪಕ್ಷೇತರರ ಸಹಿತ 236 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಕೆಗೆ ಗುರುವಾರ ಅಂತಿಮ ದಿನವಾಗಿತ್ತು. ನಾಮಪತ್ರ ಸಲ್ಲಿಕೆಗೆ ಆರಂಭವಾದ ಎರಡು ದಿನಗಳಲ್ಲಿ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿರಲಿಲ್ಲ. ಬುಧವಾರದವರೆಗೆ ಕೇವಲ 45 ನಾಮಪತ್ರ ಸಲ್ಲಿಕೆಯಾಗಿತ್ತು. ಆದರೆ, ಗುರುವಾರ 191 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಆ ಮೂಲಕ ಒಟ್ಟು 236 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.
ಕಾಂಗ್ರೆಸ್ 66, ಬಿಜೆಪಿ 94, ಜೆಡಿಎಸ್ 14, ಸಿಪಿಐ 1, ಸಿಪಿಎಂ 8, ಎಸ್ಡಿಪಿಐ 10, ಜೆಡಿಯು 2, ಡಬ್ಲುಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 3 ಹಾಗೂ ಪಕ್ಷೇತರರ 35 ನಾಮಪತ್ರಗಳು ಸಲ್ಲಿಕೆಯಾಗಿವೆ.