ಮಂಗಳೂರು, ಸೆ15: ಕದ್ರಿ ಕ್ರಿಕೆಟರ್ಸ್ ಕ್ಲಬ್ ಆಯೋಜಿಸಿದ್ದ ರಿದಮಿಕ್ ನೈಟ್ 2017 ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟ ಡಾ. ಶಿವರಾಜ್ ಕುಮಾರ್ ಪ್ರಮುಖ ಆಕರ್ಷಣೆಯಾಗಿದ್ದು, ಕರಾವಳಿಯ ಸಂಸ್ಕ್ರತಿ, ಆಚರಣೆ, ಪರಂಪರೆಯ ಜನಪದ ಸೊಗಡು ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು. ಕರಾವಳಿ ಮತ್ತು ಇಲ್ಲಿನ ಜನತೆಯ ಮೇಲೆ ಅಪಾರ ಒಲವು ಇಟ್ಟುಕೊಂಡಿರುವ ಶಿವರಾಜ್ ಕುಮಾರ್ ಹುಲಿಕುಣಿತದ ಬೀಟ್ ಗೆ ಹೆಜ್ಜೆ ಹಾಕುವ ಮೂಲಕ ಜಬರ್ದಸ್ತ್ ಆಗಿ ಕುಣಿದು ನೆರೆದ ಸಾವಿರಾರು ಜನರ ಮನರಂಜಿಸಿದರು.