ಮಂಗಳೂರು, ಅ.29(Daijiworld News/SS): ನಗರದ ಹೊರವಲಯದ ನವಮಂಗಳೂರು ಬಂದರಿನಲ್ಲಿ ಹೂಳು ತೆಗೆಯಲು ಬಂದಿದ್ದ ಮುಂಬಯಿ ಮೂಲದ ಮರ್ಕೆಟರ್ ಸಂಸ್ಥೆಯ ಡ್ರೆಜ್ಜರ್ ಭಗವತಿ ಪ್ರೇಮ್ನ ಚುಕ್ಕಾಣಿ ತುಂಡಾಗಿ ಮರಳಿನಲ್ಲಿ ಹೂತು ಹೋದ ಘಟನೆ ಸಂಭವಿಸಿದೆ.
ಡ್ರೆಜ್ಜರ್ನಲ್ಲಿ ನಾವಿಕನ ಸಹಿತ ಒಟ್ಟು 15 ಮಂದಿ ಸಿಬಂದಿಗಳಿದ್ದು, ಅವರನ್ನು ರಕ್ಷಿಸಲಾಗಿದೆ. ನವಮಂಗಳೂರು ಬಂದರು ಸಮೀಪದ ಚಿತ್ರಾಪುರ ಬಳಿ ತೇಲಿ ಬಂದ ಡ್ರೆಜ್ಜರನ್ನು ಎನ್ಎಂಪಿಟಿ ಟಗ್ಗಳು ನಿಯಂತ್ರಣಕ್ಕೆ ತರಲು ಸತತ ಪ್ರಯತ್ನ ನಡೆಸಿದ್ದು, ಸಂಜೆಯ ವೇಳೆ ಡ್ರೆಜ್ಜರನ್ನು ಹೊಸ ಬೆಟ್ಟು ಸಮೀಪ ಸಮುದ್ರ ತೀರದಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ.