ಉಡುಪಿ, ಅ 27 (Daijiworld News/MSP): ಮಣಿಪಾಲದ ಹ್ಯಾಂಗ್ ಔಟ್ ರೆಸ್ಟೋರೆಂಟ್ ನ ಕಿಚನ್ ನಲ್ಲಿ ಅ.26ರ ಶನಿವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಭಾಗಶಃ ಸುಟ್ಟು ಹೋದ ಘಟನೆ ನಡೆದಿದೆ. ಘಟನೆ ನಡೆದ ಸಂದರ್ಭ ಸಿಬ್ಬಂದಿಗಳು ಕೆಲಸ ಮಾಡಿತ್ತಿದ್ದು ಯಾವುದೇ ಗಾಯಾಗಳಾದ ಬಗ್ಗೆ ವರದಿಯಾಗಿಲ್ಲ. ತಕ್ಷಣ ಅಗ್ನಿಶಾಮಕದ ಸಹಾಯದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಸುಮಾರು 7.30 ಗಂಟೆಗೆ ರೆಸ್ಟೋರೆಂಟ್ ನ ಕಿಚನ್ ನಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಅಪಾರ ನಷ್ಟ ಉಂಟಾಯಿತು. ಪ್ಯಾನ್, ಅಡುಗೆ ಮನೆಯಲ್ಲಿನ ಅನೇಕ ವಸ್ತುಗಳು ಬೆಂಕಿ ತಗುಲಿ ನಾಶವಾಗಿದ್ದು ಸುಮಾರು ರೂ. 3 ಲಕ್ಷಕ್ಕೂ ಅಪಾರ ನಷ್ಟ ವಾಗಿದೆ ಎಂದು ರೆಸ್ಟೋರೆಂಟ್ ನ ಮ್ಯಾನೇಜರ್ ಇಲಿಯಾಸ್ ದಾಯ್ಜಿವರ್ಲ್ಡ್ ಗೆ ತಿಳಿಸಿದ್ದಾರೆ.
ರೆಸ್ಟೋರೆಂಟ್ ನಲ್ಲಿದ್ದ ಗ್ರಾಹಕರನ್ನು ಆ ತಕ್ಷಣ ಹೊರಗೆ ಕಳುಹಿಸಲಾಯಿತು. ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದ ಅಲ್ಲಿನ ಸಿಬ್ಬಂದಿಗಳು ನೀರನ್ನು ಹರಿಸಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟರು. ಆದರೆ ಬೆಂಕಿ ಹತೋಟಿಗೆ ಬಾರದ ಕಾರಣ ಅಗ್ನಿಶಾಮಕದವರನ್ನು ಕರೆಸಲಾಯಿತು. ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಅವರು ಬೆಂಕಿಯ ಕೆನ್ನಾಲಿಗೆಯನ್ನು ನಂದಿಸುವಲ್ಲಿ ಯಶಸ್ವಿಯಾದರು.