ಮಂಗಳೂರು, ಅ 26 (Daijiworld News/MSP): ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿದ್ದ ಚಂಡಮಾರುತ 'ಕ್ಯಾರ್' ತನ್ನ ಪಥ ಬದಲಿಸಿದ್ದು. ಚಂಡಮಾರುತ ಕರಾವಳಿಗೆ ಅಪ್ಪಳಿಸುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ತನ್ನ ಕ್ಯಾರ್ ಚಂಡಮಾರುತ ಓಮನ್ ದೇಶದತ್ತ ಪಥ ಬದಲಾಯಿಸಿದೆ ಎಂದು ಇಲಾಖೆ ತಿಳಿಸಿದೆ.
ಈ ಹಿಂದೆ ಕ್ಯಾರ್ ಚಂಡಮಾರುತ ಮಂಗಳೂರು, ಉಡುಪಿ ಭಾಗಕ್ಕೆ ಅಪ್ಪಳಿಸುವ ಬಗ್ಗೆ ಎಚ್ಚರಿಕೆ ನೀಡಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಮಾತ್ರವಲ್ಲದೆ ಶುಕ್ರವಾರ ಹಾಗೂ ಶನಿವಾರ ಅವಿಭಜಿತ ಜಿಲ್ಲೆ ಹಾಗೂ ಕಾಸರಗೋಡಿನ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಹವಾಮಾನ ಇಲಾಖೆ ನೀಡಿದ್ದ ಮುನ್ನೆಚ್ಚರಿಕೆಯಂತೆ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಮೀನುಗಾರರಿಗೆ ಸಮುದ್ರದ ರಾಕ್ಷಸ ಅಲೆಗಳ ದರ್ಶನವಾಗಿತ್ತು. ಮಾತ್ರವಲ್ಲದೆ ಕ್ಯಾರ್ ಚಂಡಮಾರುತ ಉಡುಪಿ ಜಿಲ್ಲೆಯಲ್ಲಿ ಎರಡು ಜೀವಬಲಿ ಪಡೆದಿತ್ತು.
ಚಂಡಮಾರುತ ತನ್ನ ಪಥ ಬದಲಾಯಿಸಿದರೂ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅಪಾರ ಪ್ರಮಾಣದ ಬೇಸಾಯ ಆಸ್ತಿ- ಪಾಸ್ತಿ ಹಾನಿ ಉಂಟಾಗಿದೆ.