ಬೆಳ್ತಂಗಡಿ, ಅ 26 (Daijiworld News/MSP): ಬಾಲಕನೋರ್ವ ಪಾಳುಬಿದ್ದ ನೀರು ತುಂಬಿದ ಕಲ್ಲಿನ ಕೋರೆಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ, ಮೂಡುಬಿದಿರೆ ತಾಲೂಕಿನ ಗಡಿ ಪ್ರದೇಶವಾದ ಹೊಸಂಗಡಿ ಪೇರಿ ಎಂಬಲ್ಲಿ ಆ. 25 ರ ಶುಕ್ರವಾರ ಸಂಜೆ ನಡೆದಿದೆ.
ಮೃತ ಬಾಲಕನನ್ನು ಪೇರಿ ನಿವಾಸಿ ರವಿ ಮತ್ತು ಗಿರಿಜಾ ದಂಪತಿಯ ಪುತ್ರ ಅಭಿಷೇಕ್ ಎಂದು ಗುರುತಿಸಲಾಗಿದೆ. 6ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ನಿನ್ನೆ ಸಂಜೆ ಗೆಳೆಯರೊಂದಿಗೆ ಮೀನು ಹಿಡಿಯಲು ಹೋಗಿದ್ದ ಈ ವೇಳೆ ಈ ಅವಘಡ ಸಂಭವಿಸಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬಾಲಕನ ಮನೆಗೆ ತಹಸೀಲ್ದಾರ್ ಭೇಟಿ ನೀಡಿದ್ದಾರೆ.