ಮಂಗಳೂರು, ಅ 25 (Daijiworld News/MSP): ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ತೊಕ್ಕೊಟ್ಟವಿನ ಕಲ್ಲಾಪು ಬಳಿ ಅ. 25 ರ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತ ಯುವಕನನ್ನು ಅಬ್ರಹಾಂ ಅವರ ಪುತ್ರ ವಿಲ್ಸನ್ ಫೆರ್ನಾಂಡಿಸ್ (26) ಎಂದು ಗುರುತಿಸಲಾಗಿದೆ.
ಸಹೋದರ ನೆಲ್ಸನ್ ಫೆರ್ನಾಂಡಿಸ್ ನೊಂದಿಗೆ ವಿಲ್ಸನ್ ಅವರು ಕಲ್ಲಾಪು ಬಳಿ ನೆಲ್ಸನ್ ಆಟೋ ಎಲೆಕ್ಟ್ರಿಕಲ್ ವರ್ಕ್ಸ್ ಎನ್ನುವ ಅಂಗಡಿ ನಡೆಸುತ್ತಿದ್ದು, ಇಂದು ಕೆಲಸಗಾರನೊಂದಿಗೆ ಮಹಡಿ ಏರಿ ಅಂಗಡಿಯ ಬೋರ್ಡ್ ದುರಸ್ತಿಗೆ ಮುಂದಾದಾಗ ಇಬ್ಬರಿಗೂ ಶಾಕ್ ತಗುಲಿದೆ. ತಕ್ಷಣ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತದರೂ ದಾರಿ ಮದ್ಯೆ ವಿಲ್ಸನ್ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಕೆಲಸಗಾರನಿಗೂ ತಲೆಗೆ ಏಟು ತಗುಲಿದೆ ಎಂದು ತಿಳಿದುಬಂದಿದೆ.