ಕಾಸರಗೋಡು, ಅ 24 (Daijiworld News/MSP): ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪೈವಳಿಕೆ ನಗರ ಸರಕಾರಿ ಶಾಲೆಯಲ್ಲಿ ಬಿರುಸಿನಿಂದ ಸಾಗಿದ್ದು ಧ್ಯಾಹ್ನದೊಳಗೆ ಫಲಿತಾಂಶ ಹೊರ ಬೀಳಲಿದೆ. ಒಟ್ಟು 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
198 ಮತಗಟ್ಟೆಗಳ ಮತ ಎಣಿಕೆ ನಡೆಯಲಿದ್ದು , ಮೊದಲು ಐದು ಮತಯಂತ್ರಗಳ ಮತ ಎಣಿಕೆ ನಡೆಯಲಿದೆ. ಜೊತೆಗೆ ಈ ಮತಗಟ್ಟೆಗಳ ವಿ ವಿ ಪ್ಯಾಟ್ ಸ್ಲಿಪ್ ಗಳನ್ನು ಎಣಿಕೆ ಮಾಡಲಾಗುವುದು.ಅಕ್ಟೋಬರ್ 21 ರಂದು ನಡೆದ ಉಪಚುನಾವಣೆಯಲ್ಲಿ 75 . 78 ಶೇಕಡಾ ಮತದಾನವಾಗಿತ್ತು. ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯು ಡಿ ಎಫ್ ನಿಂದ ಎಂ .ಸಿ ಖಮರುದ್ದೀನ್ ,ಬಿಜೆಪಿಯಿಂದ ರವೀಶ ತಂತ್ರಿ ಕುಂಟಾರು , ಎಲ್ ಡಿ ಎಫ್ ನಿಂದ ಎಂ . ಶಂಕರ ರೈ , ಅಂಬೇಡ್ಕರ್ ರೈಟ್ ಪಾರ್ಟಿ ಆಫ್ ಇಂಡಿಯಾ( ಎಪಿಎ ) ದಿಂದ ಗೋವಿಂದನ್ ಬಿ . , ಖಮರುದ್ದೀನ್ ಎಂ .ಸಿ ( ಪಕ್ಷೇತರ ) , ಜೋನ್ ಡಿ ಸೋಜ . ಐ ( ಪಕ್ಷೇತರ ) , ರಾಜೇಶ್ ಬಿ . ( ಪಕ್ಷೇತರ ) ಕಣದಲ್ಲಿದ್ದಾರೆ .
ಪ್ರಸ್ತುತ ೬ ಸುತ್ತುಗಳ ಮತ ಎಣಿಕೆ ಮುಗಿದಿದ್ದು, ಯು ಡಿ ಎಫ್ ಎಂ .ಸಿ ಖಮರುದ್ದೀನ್ ನಡುವೆ ಬಿಜೆಪಿಯ ರವೀಶ ತಂತ್ರಿ ಕುಂಟಾರು ನಡುವೆ ಪೈಪೋಟಿ ಏರ್ಪಟ್ಟಿದೆ.
ಎಂ .ಸಿ ಖಮರುದ್ದೀನ್ 4364ಮತಗಳನ್ನು ಪಡೆದರೆ, ಬಿಜೆಪಿ ರವೀಶ ತಂತ್ರಿ 3534 ಮತ, ಹಾಗೂ ಶಂಕರ ರೈ 1256 ಮತಗಳನ್ನು ಪಡೆದಿದ್ದಾರೆ.