ಕಾಸರಗೋಡು ಜ 07 : ನಿವೃತ್ತ ಶಿಕ್ಷಣಾಧಿಕಾರಿಯೋರ್ವರಿಗೆ ಮೋಸ ಮಾಡಿ ಲಕ್ಷಾಂತರ ರೂ . ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮೂಲದ ಓರ್ವನನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೂಲತಃ ಊಟಿಯ ನಿವಾಸಿ , ಪ್ರಸ್ತುತ ಕಾಞ೦ಗಾಡ್ ಪಡನ್ನಕಾಡ್ ನ ಪ್ರಕಾಶ್ ಮೂರ್ತಿ ( 61) ಎಂದು ಗುರುತಿಸಲಾಗಿದೆ.
ಪಡನ್ನಕಾಡ್ ನಿವಾಸಿ ಹಾಗೂ ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಎ. ಎಂ ಮುಹಮ್ಮದ್ ಕುಞ ಯವರ ದೂರಿನಂತೆ ಈತನನ್ನು ಬಂಧಿಸಲಾಗಿದೆ. ಸುಮಾರು 35 ಲಕ್ಷ ರೂ .ಗಳನ್ನು ಹಲವು ರೀತಿಯಲ್ಲಿ ಪಡೆದು ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಮುಹಮ್ಮದ್ ಕುಞ ಯವರ ಮನೆಯಲ್ಲಿ ಮಾರ್ಬಲ್ ಕೆಲಸಕ್ಕೆ ಬಂದಿದ್ದ ಈತ ಬಳಿಕ ಸ್ನೇಹ ಬೆಳೆಸಿ ದ್ದು, ಬಳಿಕ ಮುಹಮ್ಮದ್ ಕುಞ ಯವರ ಮಾರ್ಬಲ್ ಮಳಿಗೆಯಲ್ಲಿ ಕೆಲಸ ಗಿಟ್ಟಿಸಿ ಉಸ್ತುವಾರಿ ವಹಿಸಿದ್ದನು. ಈ ನಡುವೆ ಮುಹಮ್ಮದ್ ಕುಞ ಯವರ ಪುತ್ರ ಷರೀಫ್ ವಿದೇಶಕ್ಕೆ ತೆರಳಿದ್ದು , ಪ್ರಕಾಶ್ ಮೂರ್ತಿ ಮಾರ್ಬಲ್ ಮಳಿಗೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದನು .
ಮಾರ್ಬಲ್ ಮಳಿಗೆ ನಷ್ಟ ಉಂಟಾದ ಹಿನ್ನಲೆಯಲ್ಲಿ ಪರಿಶೀಲಿಸಿದಾಗ ಈತ ಚೆಕ್ ದುರುಪಯೋಗ ಸೇರಿದಂತೆ ಹಲವು ರೀತಿಯಲ್ಲಿ ೩೫ ಲಕ್ಷ ರೂ . ಗಳಷ್ಟು ವಂಚನೆ ನಡೆಸಿರುವುದು ತಿಳಿದು ಬಂದು, ದೂರು ನೀಡಲಾಗಿತ್ತು.