ಮಂಗಳೂರು ಜ 07: ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ದಾಳಿಗೆ ಒಳಗಾಗಿ ಇಂದು ಸಾವನಪ್ಪಿದ್ದ ಬಶೀರ್ ಅವರ ಅಂತಿಮ ದರ್ಶನಕ್ಕಾಗಿ ಆಗಮಿಸಿದ ಬಿಜೆಪಿ ಮುಖಂಡ, ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರಿಗೆ ಖಾಸಗಿ ಆಸ್ಪತ್ರೆಯ ಶವಾಗಾರದ ಆವರಣದಲ್ಲಿ ಜಮಾಯಿಸಿದ್ದ ಜನರು ತೀವ್ರ ಆಕ್ರೋಶ ವ್ಯಕ್ತ ಪಡಿಸಿ ದಿಕ್ಕಾರ ಘೋಷಣೆ ಕೂಗಿದ್ದಾರೆ.
ಅಂತಿಮ ದರ್ಶನ ಮಾಡಿ ಹೊರಬರುವವರೆಗೂ ಸುಮ್ಮನಿದ್ದ ಜನ ಪಾಲಿಮಾರ್ ಮಾದ್ಯಮದರ ಮುಂದೆ ಮಾತನಾಡಲು ಮುಂದಾದಾಗ , ನೀವೆ ಹತ್ಯೆಯ ಹೊಣೆಗಾರರು, ನೀವೆ ಹಣ ಕೊಟ್ಟು ಅಮಾಯಕರನ್ನು ಕೊಲ್ಲಿಸುವುದು ಬಳಿಕ ಶಾಂತಿ ಸಾಮರಸ್ಯ ಎಂದು ಹೇಳಿ ರಾಜಕಾರಣ ಮಾಡಲು ಬರುವುದು ಎಂದು ಅಲ್ಲಿ ಸೇರಿರುವ ಜನ ತರಾಟೆಗೆ ತೆಗೆದುಕೊಂಡರು. ತಕ್ಷಣ ಎಚ್ಚೆತ್ತ ಪೊಲೀಸರು ಪಾಲೇಮಾರ್ ಅವರನ್ನು ಆಸ್ಪತ್ರೆಯ ವಠಾರದಿಂದ ವಾಪಾಸ್ ತೆರಳುವಂತೆ ಸೂಚಿಸಿದ್ದಾರೆ.
ಬಳಿಕ ಭೇಟಿ ಮಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ 10 ಲಕ್ಷ ಪರಿಹಾರಧನ ಘೋಷಣೆ ಮಾಡಿದರು. ಅಲ್ಲದೆ ಜಿಲ್ಲೆಯ ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.