ಬೆಳ್ತಂಗಡಿ ಜ 07 : ದ್ವೇಷ ರಾಜಕೀಯ ಇದೆಯಲ್ಲ ಅದಕ್ಕೆ ಕೊನೆಯೇ ಇಲ್ಲ. ಯಾರೂ ಕೂಡಾ ಶವದ ಮೇಲೆ ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜ 7 ರ ಭಾನುವಾರ ಮನವಿ ಮಾಡಿದ್ದಾರೆ. ಬಷೀರ್ ಸಾವಿನ ಸುದ್ದಿ ಕೇಳಿ ವೈಯಕ್ತಿಕವಾಗಿ ನನಗೆ ನೋವಾಗಿದೆ ಎಂದು ಮಾದ್ಯಮದವರಿಗೆ ಬೆಳ್ತಂಗಡಿಯಲ್ಲಿ ಸಿಎಂ ತಿಳಿಸಿದ್ದಾರೆ.
ದುಷ್ಕರ್ಮಿಗಳಿಂದ ದಾಳಿಗೊಳಗಾಗಿ ಬಶೀರ್ ಅವರು ಸಾವನ್ನಪ್ಪಿದ ಬಳಿಕ ಬೆಳ್ತಂಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದರಿಂದ ಸಮಾಜಕ್ಕೆ ಹಾನಿಯಾಗುತ್ತದೆ, ಅದರಿಂದ ಲಾಭ ಯಾರಿಗೂ ಇಲ್ಲ' ಎಂದರು. ಶವದ ಮೇಲೆ ರಾಜಕಾರಣ ಮಾಡಬಾರದು. ಸತ್ತಾಗ ಸಾತ್ವಾನ ಹೇಳಬೇಕು' ಎಂದರು. ಬಿಜೆಪಿಯವರು ಒಬ್ಬರು ಸತ್ತ ತಕ್ಷಣ ಪ್ರತಿಭಟನೆ ಮಾಡುತ್ತಾರೆ. ಅವರಿಗೆ ಮನುಷತ್ವ ಇದ್ದರೆ ಈಗಲೂ ಪ್ರತಿಭಟನೆ ಹಮ್ಮಿಕೊಳ್ಳಬೇಕಲ್ಲ, ಮುಸ್ಲಿಂ ಸತ್ತರೆ ಯಾಕೆ ಪ್ರತಿಭಟನೆ ನಡೆಸುವುದಿಲ್ಲ' ಎಂದು ಕಿಡಿ ಕಾರಿದರು.
ಮನುಷ್ಯತ್ವ ಇಲ್ಲದವರು ಈ ರೀತಿ ಕೃತ್ಯ ಎಸಗುತ್ತಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಶಾಂತಿ ಕಾಪಾಡಲು ,ಸಾಮರಸ್ಯ ಮೂಡಲು ಎಲ್ಲರೂ ಪ್ರಯತ್ನ ಮಾಡಬೇಕು..ಕರಾವಳಿ ಜನ ಬುದ್ದಿವಂತರು ಆದರೆ ಯಾರೋ ಒಂದಿಷ್ಟು ಜನ ಮನುಷ್ಯ ದ್ವೇಷಿಗಳು ಮಾತ್ರ ಈ ರೀತಿಯ ಕೃತ್ಯಕ್ಕೆ ಕೈ ಹಾಕುತ್ತಾರೆ ಎಂದು ಕಿಡಿಕಾರಿದರು.