ಮಂಗಳೂರು ಜ 07: ನಾವು ನಮ್ಮ ಸಹೋದರನ್ನು ಕಳೆದುಕೊಂಡಿದ್ದೇನೆ.. ದಯವಿಟ್ಟು ನನ್ನ ಹಿಂದು,ಮುಸ್ಲಿಂ, ಕ್ರೈಸ್ತ,ದಲಿತ,ಸಿಖ್ ಬಾಂಧವರೇ ಯಾರು ದಯವಿಟ್ಟು ಗಲಾಟೆ ಮಾಡಬೇಡಿ ಪ್ರತಿಕಾರದ ಮನೋಭಾವನೆ ಬೇಡ.. ಕೊಲೆಗೆ ಕೊಲೆ ಉತ್ತರವಲ್ಲ ಎಂದು ಬಷೀರ್ ಸಹೋದರ ಹಕೀಂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಮಾಯಕ ಜೀವವನ್ನು ಬಲಿ ತೆಗೆದುಕೊಂಡ ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು ಎಂದಷ್ಟೇ ನಮ್ಮ ಮನವಿ ಎಂದು ಮಾದ್ಯಮಗಳಿಗೆ ಕೊಟ್ಟಾರಚೌಕಿಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಇಂದು ಸಾವನಪ್ಪಿದ ಬಷೀರ್ ಸಹೋದರ ಹಕೀಂ ತಿಳಿಸಿದ್ದಾರೆ .
ಇನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದ ಬಶೀರ್ ಅವರ ಮೃತದೇಹವನ್ನು ಆಕಾಶನಭವನದ ಮನೆಯ ಬಳಿ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದ್ದು, ಮನೆಯ ಬಳಿ ಕೇವಲ ಮಹಿಳೆಯರಿಗೆ ಮಾತ್ರ ಪಾರ್ಥೀವ ಶರೀರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಕೂಳೂರು ಜುಮ್ಮ ಮಸೀದಿ ಬಳಿ ಸಾರ್ವಜನಿಕರಿಗೆ ಅಂತಿಮ ದರ್ಶನ ಮಾಡಬಹುದಾಗಿದೆ ಎಂದರು.
ಸ್ಥಳಕ್ಕೆ ಸಚಿವ ಖಾದರ್, ಶಾಸಕ ಮೊಯಿದ್ದೀನ್ ಬಾವಾ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.