ಬೆಳ್ಮಣ್, ಅ 18 (Daijiworld News/MSP): ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆಯ ಬಸ್ಸು ತಂಗುದಾಣದ ಹತ್ತಿರ ಪಾಳು ಬಿದ್ದ ಮನೆಯ ಅಂಗಳದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಗುರುವಾರ ಪತ್ತೆಯಾಗಿದೆ. ಪಿಯೂಸ್ ಡಿಸೋಜ(59) ಎಂಬವರು ಹಲವಾರು ಸಮಯಗಳಿಂದ ಪತ್ನಿ ಹಾಗೂ ಪುತ್ರಿಯಿಂದ ದೂರವಿದ್ದು ಒಬ್ಬರೇ ಜಾರಿಗೆಕಟ್ಟೆಯ ಪಾಳು ಮನೆಯೊಂದರಲ್ಲಿ ವಾಸಿಸುತ್ತಿದ್ದರು.
ತುಂಬಾ ಕಡಿತದ ಚಟ ಹೊಂದಿದ್ದ ಅವರು ಪಾಳು ಮನೆಯ ಅಂಗಳದಲ್ಲಿಯೇ ಶವವಾಗಿದ್ದಾರೆ. ಗುರುವಾರ ಈ ಪರಿಸರದ ಜನರಿಗೆ ವಿಪರೀತ ವಾಸನೆ ಬಂದ ಕಾರಣ ಹುಡುಕಾಡಿದಾಗ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.