ಕುಂದಾಪುರ, ಅ 17 (DaijiworldNews/SM):ಬೈಂದೂರು ಕಂಬದಕೋಣೆ ಬಳಿ ರಜೆಯ ಮಜಾದಲ್ಲಿದ್ದ ನಾಲ್ವರು ಮಕ್ಕಳು ಈಜಲು ತೆರಳಿದ ಸಂದರ್ಭದಲ್ಲಿ ಇಬ್ಬರು ಮಕ್ಕಳು ನೀರುಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕನ ಮೃತದೇಹ ಗುರುವಾರ ಸಂಜೆ ಪತ್ತೆಯಾಗಿದೆ.
ಬಾಲಕರು ಹೊಳೆ ಪಾಲಾಗಿರುವ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳ, ಮುಳುಗು ತಜ್ಞರು ಕಾರ್ಯಾಚರಣೆ ಆರಂಭಿಸಿದ್ದರು. ನಿರಂತರ ಕಾರ್ಯಾಚರಣೆಯ ಬಳಿಕ ವಂಶಿತ್ ಶೆಟ್ಟಿ ಎಂಬವನ ಶವ ಪತ್ತೆಯಾಗಿದೆ. ಸುರತ್ಕಲ್ ನ ಮುಳುಗು ತಜ್ಞರ ತಂಡ ಕಾರ್ಯಾಚರಣೆ ನಡೆಸಿ ವಂಶಿಕ್ ಶವವನ್ನು ಮೇಲಕ್ಕೆತ್ತಿದೆ. ನೀರು ಪಾಲಾಗಿರುವ ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.
ಪ್ರಕರಣದ ಹಿನ್ನೆಲೆ:
ಶಾಲೆಗೆ ಮಧ್ಯಾವದಿ ರಜೆಯ ಕಾರಣದಿಂದ ನಾಲ್ವರು ವಿದ್ಯಾರ್ಥಿಗಳ ತಂಡ ಹೊಳೆಗೆ ಸ್ನಾನಕ್ಕೆ ತೆರಳಿದೆ. ಈ ಸಂದರ್ಭದಲ್ಲಿ ವಂಶಿತ್ ಶೆಟ್ಟಿ (12) ಮತ್ತು ರಿತೇಶ್ ಶೆಟ್ಟಿ (12) ನೀರುಪಾಲಾಗಿದ್ದಾರೆ. ಇವರಿಬ್ಬರು ಸಂದೀಪನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಏಳನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.
ಸಂದೀಪನ್ ಶಾಲೆಯ ಎಸ್ ಎಸ್ ಎಸ್ ಸಿ ವಿದ್ಯಾರ್ಥಿಗಳಾದ ಪ್ರದ್ವಿತ್ ಶೆಟ್ಟಿ ಮತ್ತು ವಿಜಯೇಂದ್ರ ಶೆಟ್ಟಿ ಜೊತೆ ಈಜಲೆಂದು ವಂಶಿತ್ ಹಾಗೂ ರಿತೇಶ್ ಹೋದಾಗ ಈ ಘಟನೆ ನಡೆದಿದೆ. ಪ್ರದ್ವಿತ್ ಶೆಟ್ಟಿ ಮತ್ತು ವಿಜಯೇಂದ್ರ ಶೆಟ್ಟಿ ಈಜಲು ಬರುವ ಹಿನ್ನಲೆಯಲ್ಲಿ ಇವರಿಬ್ಬರು ಬಚಾವ್ ಆಗಿದ್ದಾರೆ.
ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳ ಮೃತದೇಹಕ್ಕೆ ನಡೆಯುತ್ತಿರುವ ಶೋಧ ಕಾರ್ಯ ಮುಂದುವರಿಸಲಾಗಿದೆ.